ಕರ್ನಾಟಕ

ಸೂರ್ಯಗ್ರಹಣ ಹಿನ್ನೆಲೆ ನಾಲ್ಕು ಗಂಟೆಗಳ ಕಾಲ ಶಬರಿಮಲೆ ದೇಗುಲದ ಬಾಗಿಲು ಬಂದ್

Pinterest LinkedIn Tumblr

ತಿರುವನಂತಪುರಂ: ಡಿಸೆಂಬರ್ ತಿಂಗಳಿನಲ್ಲಿ ನಾಲ್ಕು ಗಂಟೆಗಳ ಕಾಲ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇಗುಲ ಬಂದ್ ಆಗಲಿವೆ ಎಂದು ದೇವಸ್ವ ಮಂಡಳಿ ಹೇಳಿದೆ.

ಈ ಕುರಿತಂತೆ ತಿರುವಾಂಕೂರು ದೇವಸ್ವಂ ಮಂಡಳಿ ಪ್ರಕಟಣೆ ಹೊರಡಿಸಿದ್ದು, ಭಕ್ತಾದಿಗಳು ಸಹಕರಿಸಬೇಕಾಗಿ ಕೋರಿದ್ದಾರೆ. ಡಿಸೆಂಬರ್ 26ರಂದು ಸೂರ್ಯಗ್ರಹಣ ಇರುವುದರಿಂದ ನಾಲ್ಕು ಗಂಟೆಗಳ ಕಾಲ ದೇಗುಲದ ಬಾಗಿಲು ಬಂದ್ ಆಗಲಿದೆ ಎಂದು ಹೇಳಲಾಗಿದೆ.

ಆ ದಿನ ಬೆಳಗ್ಗೆ 7:30 ರಿಂದ 11:30 ಅವಧಿಯಲ್ಲಿ ಪೂಜೆ ಪುನಸ್ಕಾರ ನಡೆಯುವುದಿಲ್ಲ. ಡಿಸೆಂಬರ್ 26ರಂದು 8:06ರಿಂದ11:13 ರ ತನಕ ಸೂರ್ಯಗ್ರಹಣ ಇರಲಿದೆ. ಗ್ರಹಣ ವಿಮೋಚನೆ ನಂತರ ಪೂಜೆಗೆ ಅನುವು ಮಾಡಿಕೊಡಲಾಗುವುದು.

ಇದಕ್ಕೂ ಮುನ್ನ ಬೆಳಗ್ಗೆ ಸಾಂಪ್ರದಾಯಿಕ ಪೂಜೆ, ನೆಯ್ಯಾಭಿಷೇಕಂ ನೆರವೇರಲಿದೆ. ಗ್ರಹಣ ಬಳಿಕ ಪುಣ್ಯಃ ಮುಗಿಸಿ, ಸ್ವಚ್ಛತಾ ಕಾರ್ಯ ಮುಗಿಸಿದ ಬಳಿಕ ಎಲ್ಲರಿಗೂ ದರ್ಶನಕ್ಕೆ ವ್ಯವಸ್ಥೆ ಎಂದಿನಂತೆ ನಡೆಯಲಿದೆ ಎಂದು ಮುಖ್ಯ ತಂತ್ರಿಗಳಾದ ಮಹೆಶ್ ಮೋಹನಾರು ಹೇಳಿದ್ದಾರೆ.

ತಿರುವಾಂಕೂರು ಮಂಡಳಿ ಅಧೀನದಲ್ಲಿರುವ ಮಲಿಕಾಪ್ಪುರಂ ಹಾಗೂ ಪಂಬಾ ದೇಗುಲಗಳು ಕೂಡಾ ಈ ಸಂದರ್ಭದಲ್ಲಿ ಮುಚ್ಚಲಾಗುತ್ತದೆ. ನವೆಂಬರ್ 17ರಿಂದ ಮಕರವಿಳಕ್ಕು ಯಾತ್ರೆ ಆರಂಭವಾಗಿದ್ದು,ಭಕ್ತಾದಿಗಳ ಸಂಖ್ಯೆ ಪ್ರತಿದಿನ ಹೆಚ್ಚಾಗುತ್ತಿದೆ.

Comments are closed.