ಕರ್ನಾಟಕ

ಕಾಂಗ್ರೆಸ್ ನ 35 ಶಾಸಕರು ನನ್ನೊಟ್ಟಿಗಿದ್ದಾರೆ: ರಮೇಶ್ ಜಾರಕಿಹೊಳಿ

Pinterest LinkedIn Tumblr


ಬೆಳಗಾವಿ: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆ ಪ್ರಚಾರದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಬ್ಯುಸಿಯಾಗಿವೆ,ಅದೇ ಹೊತ್ತಲ್ಲೆ ಗೋಕಾಕ್ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.

ಈ ಮೊದಲು ನನಗೆ 17 ಶಾಸಕರ ಬೆಂಬಲವಿತ್ತು, ಈಗ ಕಾಂಗ್ರೆಸ್ ನ ಇನ್ನೂ 35 ಶಾಸಕರು ನನ್ನ ಜೊತೆ ಇದ್ದಾರೆ, ಆವರೆಲ್ಲರನ್ನು ಕರೆತಂದು ಕಾಂಗ್ರೆಸ್ ಖಾಲಿ ಮಾಡುವ ಶಕ್ತಿ ನನಗಿದೆ.

ಗೋಕಾಕ್ ನಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ನನ್ನ ವಿರುದ್ಧ ಕಾಂಗ್ರೆಸ್ ನಾಯಕರು ಅಸಂಬದ್ಧವಾದ ಆರೋಪ ಮಾಡಿದರೇ ನಾನು ಏನು ಎಂಬುದನ್ನು ತೋರಿಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಮತ್ತೆ ಉಪ ಚುನಾವಣೆ ಎದುರಾಗಲು ಕಾಂಗ್ರೆಸ್ ನಾಯಕರ ಬೇಜಾವಾಬ್ದಾರಿ ವರ್ತನೆ ಕಾರಣ ಎಂದು ಆರೋಪಿಸಿದ್ದಾರೆ, ಹಣ ಮತ್ತು ಅಧಿಕಾರದ ಆಸೆಗೆ ನಾನು ಬಿಜೆಪಿ ಸೇರಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ, ನನಗೆ ನನ್ನ ಕ್ಷೇತ್ರದ ಅಭಿವೃದ್ಧಿ ಹಾಗೂ ಜನಗಳ ಹಿತ ಮಾತ್ರ ಮುಖ್ಯ, ಹೀಗಾಗಿ ಕಾಂಗ್ರೆಸ್ ತೊರೆದೆ ಎಂದು ಸ್ಪಷ್ಟ ಪಡಿಸಿದ್ದಾರೆ.

ನನಗೆ ಗೋಕಾಕ್ ಜನಗಳ ಹಿತರಕ್ಷಣೆ ಮುಖ್ಯ ಎಂದು ಹೇಳಿರುವ ರಮೇಶ್ ಜಾರಕಿಹೊಳಿ ಉಪ ಚುನಾವಣೆಯಲ್ಲಿ ಗೆಲುವು ಖಚಿತ ಎಂದು ಹೇಳಿದ್ದಾರೆ.

Comments are closed.