ಬೆಂಗಳೂರು : ಉಪಚುನಾವಣೆಯ ಹೊತ್ತಲ್ಲೇ ಮಾಂಸ ಪ್ರಿಯರಿಗೆ ದರ ಏರಿಕೆಯ ಶಾಕ್ ಎದುರಾಗಿದ್ದು, ಚಿಕನ್ ಮತ್ತು ಮಟನ್ ರೇಟ್ ಭಾರೀ ಏರಿಕೆಯಾಗಿದೆ.
ಹೌದು, ಕಳೆದ ತಿಂಗಳು ಕೆ.ಜಿಗೆ 120 ರೂ. ಇದ್ದ ಚಿಕನ್ ದರ 180 ರೂ. ಆಗಿದೆ. ಮಟನ್ 520 ರೂ. ಯಿಂದ 560 ರೂ.ಗೆ ಏರಿಕೆಯಾಗಿದೆ. ಒಂದು ಮೊಟ್ಟೆ 4 ರೂ. ಯಿಂದ 6 ರೂ.ಗೆ ಏರಿಕೆಯಾಗಿದೆ. ಚಿಕನ್ ನಲ್ಲಿ 80 ರೂ. ಹೆಚ್ಚಾಗಿದೆ.
ಈ ವರ್ಷ ಸುರಿದ ಭಾರೀ ಮಳೆಯಿಂದಾಗಿ ಅನೇಕ ಕೋಳಿಫಾರಂಗಳು ಜಲಾವೃತ್ತವಾಗಿದ್ದು, ಬೇಡಿಕೆಯಷ್ಟು ಪೂರೈಕೆಯಾಗಿಲ್ಲ. ಜೊತೆಗೆ ಈ ಬಾರಿಯ ಕ್ರಿಸ್ ಮಸ್ ಹಾಗೂ ಹೊಸ ವರ್ಷದಲ್ಲಿ ಕೇಕ್ ಬಳಕೆ ಹೆಚ್ಚಾಗಿದ್ದು, ಮೊಟ್ಟೆಯ ಬೇಡಿಕೆ ಹೆಚ್ಚಾಗಲು ಕಾರಣ ಎನ್ನಲಾಗಿದೆ. ಇನ್ನು ವಾರದಲ್ಲೇ ಚಿಕನ್ 200 ರೂ. ಹಾಗೂ ಮಟನ್ 600 ರೂ. ಗಡಿ ದಾಟುವ ಸಾಧ್ಯತೆ ಇದೆ ಎನ್ನಲಾಗಿದೆ.

Comments are closed.