ಕರ್ನಾಟಕ

ಸೌದೆ ಕಡಿಯಲೆಂದು ಹೋದ ವ್ಯಕ್ತಿಯೊಬ್ಬ ಕಾಡಾನೆಗೆ ಬಲಿ

Pinterest LinkedIn Tumblr

ಚಾಮರಾಜನಗರ : ಸೌದೆ ಕಡಿಯಲೆಂದು ಹೋದ ವ್ಯಕ್ತಿಯೊಬ್ಬ ಕಾಡಾನೆಗೆ ಬಲಿಯಾಗಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಾಡಂಚಿನ ಗ್ರಾಮ ಕಣಿಯನಪುರ ಕಾಲೋನಿಯಲ್ಲಿ ನಡೆದಿದೆ.

ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಕುಂದಕರೆ ವಲಯಕ್ಕೆ ಸೇರಿದ ಕಣಿಯನಪುರ ಕಾಲೋನಿ ಗ್ರಾಮದ ರಂಗರಾಜು (54) ಕಾಡಾನೆ ದಾಳಿಗೆ ಬಲಿಯಾದ ದುರ್ದೈವಿ. ಇವರು ಭಾನುವಾರ ಸೌದೆ ತರಲೆಂದು ಕಾಡಿಗೆ ತೆರಳಿದ ಅವರು ಸಂಜೆಯಾದರೂ ಮನೆಗೆ ಹಿಂತಿರುಗಿರಲಿಲ್ಲ. ಹೀಗಾಗಿ ಗ್ರಾಮಸ್ಥರು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ ಸಿಬ್ಬಂದಿ ಹುಡುಕಾಟ ನಡೆಸಿದ್ದರಾದರೂ ಸುಳಿವು ಸಿಕ್ಕಿರಲಿಲ್ಲ.

ಸೋಮವಾರ ಬೆಳಿಗ್ಗೆ ರಂಗರಾಜುವಿನ ಶವ ದೊರೆತಿದೆ. ಅವರ ಮೇಲೆ ಕಾಡಾನೆಗಳು ದಾಳಿ ಮಾಡಿರುವುದು ದೃಢಪಟ್ಟಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಗುಂಡ್ಲುಪೇಟೆ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತಂತೆ ಮಾತನಾಡಿದ ಕುಂದಕೆರೆ ವಲಯ ಅರಣ್ಯಾಧಿಕಾರಿ ಮಂಜುನಾಥ ಅವರು ಮರಣೋತ್ತರ ಪರೀಕ್ಷೆ ಆಧರಿಸಿ ಹಾಗೂ ತಹಶೀಲ್ದಾರ್ ವರದಿ ಸಲ್ಲಿಸಿ ಪರಿಹಾರ ನೀಡಲಾಗುವುದು ಎಂದು ಹೇಳಿದ್ದಾರೆ.

Comments are closed.