ಕರ್ನಾಟಕ

ಫೋಟೋ ಅಲ್ಬಮ್ ಸರಿಯಾಗಿಲ್ಲೆಂದು ಫೇಸ್ ಬುಕ್ ನಲ್ಲಿ ಅಶ್ಲೀಲ ಚಿತ್ರ ಹಾಕಿದ ಸೈನಿಕ: ಮುಂದೇನಾಯ್ತು?

Pinterest LinkedIn Tumblr


ಬೆಳಗಾವಿ: ತನ್ನ ಮದುವೆಯ ಅಲ್ಬಮ್ ಸರಿಯಾಗಿ ಮಾಡಿಲ್ಲ ಎಂಬ ಕಾರಣಕ್ಕೆ ಛಾಯಾಗ್ರಾಹಕಿ ಮಹಿಳೆಯ ನಕಲಿ ಫೇಸ್‌ಬುಕ್ ಖಾತೆ ತೆರೆದು ಆಶ್ಲೀಲ ಪೋಟೊ, ಮೊಬೈಲ್ ನಂಬರ್ ಅಪ್‌ಲೋಡ್ ಮಾಡಿದ್ದ ವ್ಯಕ್ತಿಯನ್ನು ಜಿಲ್ಲಾ ಸೈಬರ್ ಇಕನಾಮಿಕ್ ಹಾಗೂ ನ್ಯಾಕೋಟಿಕ್(ಸಿಇಎನ್) ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮೀರಜ್ ತಾಲೂಕಿನ ಶಿಂದೇವಾಡಿ ಗ್ರಾಮದ ಸಚಿನ್ ರಘುನಾಥ ಶಿಂಧೆ (29) ಎಂಬಾತನನ್ನು ಬಂಧಿಸಲಾಗಿದೆ. ಪಟಿಯಾಲದಲ್ಲಿ ಭಾರತೀಯ ಸೇನೆಯಲ್ಲಿ ಸೈನಿಕನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಚಿನ್ ನಕಲಿ ಫೇಸ್‌ಬುಕ್ ಅಕೌಂಟ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ಹರಿಯಬಿಟ್ಟಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಈತನನ್ನು ಬೆಳಗಾವಿ ಜಿಲ್ಲಾ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

ಘಟನೆ ಹಿನ್ನೆಲೆ ಏನು?
ಕೆಲವು ತಿಂಗಳ ಹಿಂದೆ ಸೈನಿಕ ಸಚಿನ್ ನ ತಂಗಿ ಮದುವೆ ಸಮಾರಂಭದ ಫೋಟೋಗಳನ್ನು ಬೆಳಗಾವಿ ಜಿಲ್ಲೆಯ ಛಾಯಾಗ್ರಾಹಕ ದಂಪತಿ ತೆಗೆದಿದ್ದರು. ಇದನ್ನು ಇಷ್ಟಪಟ್ಟಿದ್ದ ಸಚಿನ್ ತನ್ನ ಮದುವೆಯ ಆರ್ಡರ್ ಕೂಡಾ ಇದೇ ದಂಪತಿಗೆ ನೀಡಿದ್ದನು. ಅದರಂತೆ ಅಲ್ಬಮ್ ಮಾಡಿ ಛಾಯಾಗ್ರಾಹಕ ದಂಪತಿ ಮನೆಗೆ ತಂದಿದ್ದರು. ಆಗ ಅಲ್ಬಮ್‌ನಲ್ಲಿ ಇನ್ನೂ ಅನೇಕ ಫೋಟೋಗಳು ಬಂದಿಲ್ಲ. ಹೊಸದಾಗಿ ಮಾಡಿ ಕೊಡುವಂತೆ ಹೇಳಿದ್ದಾನೆ.

ಈಗಾಗಲೇ ವೆಚ್ಚ ಮಾಡಿ ಅಲ್ಬಮ್ ತಯಾರಿಸಿದ್ದ ಕೊಟ್ಟಿದ್ದ ಛಾಯಾಗ್ರಾಹಕ ದಂಪತಿ ಇದಕ್ಕೆ ನಿರಾಕರಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿನ್ ಶಿಂಧೆ ದಂಪತಿಯೊಂದಿಗೆ ತಕರಾರು ತೆಗೆದು ಬಳಿಕ ಆ ಫೋಟೋಗ್ರಾಫರ್ ಮಹಿಳೆಯ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಅಕೌಂಟ್ ತೆರೆದಿದ್ದನು. ಅದರಲ್ಲಿ ಮಹಿಳೆಯರ ಅಶ್ಲೀಲ ಚಿತ್ರಗಳನ್ನು ಅಪ್‌ಲೋಡ್ ಮಾಡಿದ್ದನು. ಜೊತೆಗೆ ದಂಪತಿ ಹಾಗೂ ಇವರಿಬ್ಬರ ಮೊಬೈಲ್ ನಂಬರ್ ಹಾಕಿದ್ದನು. ಅಶ್ಲೀಲ ಸಂದೇಶಗಳನ್ನು ಹಾಕಿದ್ದನು.

ಕೆಲವು ದಿನಗಳ ನಂತರ ಇದು ದಂಪತಿಯ ಗಮನಕ್ಕೆ ಬಂದಾಗ ಕೂಡಲೇ ಜಿಲ್ಲಾ ಸಿಇಎನ್ ಪೊಲೀಸರ ಬಳಿ ಬಂದು ದೂರು ನೀಡಿದ್ದರು. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಸಿಇಎನ್ ಪೊಲೀಸರು, ಪರಿಶೀಲನೆ ನಡೆಸಿ ಆರೋಪಿ ಬಗ್ಗೆ ಮಾಹಿತಿ ಕಲೆ ಹಾಕಿದ್ದರು.

ಆರೋಪಿ ಸಚಿನ್ ಈ ರೀತಿ ಅಕೌಂಟ್ ತೆರೆದಿದ್ದು ಪೊಲೀಸರಿಗೆ ಗೊತ್ತಾಗಿದೆ. ಸಚಿನ್ ಸೇನೆಯಲ್ಲಿದ್ದಿದ್ದರಿಂದ ಬಂಧಿಸಲು ತೊಡಕಾಗಿತ್ತು. ರಜೆ ಮೇಲೆ ಬಂದಾಗ ಮಾಹಿತಿ ಪಡೆದ ಪೊಲೀಸರು ನೋಟೀಸ್ ಜಾರಿ ಮಾಡಿದ್ದರು. ಠಾಣೆಗೆ ಬಂದು ತಪ್ಪೊಪ್ಪಿಕೊಂಡಿರುವ ಸಚಿನ್ ಶಿಂಧೆಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

Comments are closed.