ಕರ್ನಾಟಕ

ತಿರುಮಲದಲ್ಲಿ ಪ್ಲಾಸ್ಟಿಕ್ ಮುಕ್ತ ಪರಿಸರ ಮಾಡಲು ದೇವಸ್ಥಾನ ಟ್ರಸ್ಟ್‌ಗಳಿಂದ ಮಹತ್ವದ ನಿರ್ಧಾರ.

Pinterest LinkedIn Tumblr

ದೇಶದ ಅತಿ ದೊಡ್ಡ ಶ್ರೀಮಂತ ದೇವರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ತಿರುಪತಿ ತಿರುಮಲ ದೇವಸ್ಥಾನದ ಪರಿಸರವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಸಂಕಲ್ಪ ಕೈಗೊಳ್ಳಲಾಗಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯಪ್ರವೃತ್ತವಾಗಿದೆ. ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ನಿಷೇಧವಾಗಬೇಕೆಂಬ ಕೂಗು ದೇಶದಾದ್ಯಂತ ಕೇಳಿಬರುತ್ತಿರುವ ಮಧ್ಯೆ ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ.

ಮೊದಲ ಹಂತವಾಗಿ ಇನ್ನೊಂದು ವಾರದಲ್ಲಿ ದೇವಸ್ಥಾನದ ಎಲ್ಲ ಕಾರ್ಯಗಳಲ್ಲಿ ನೀರಿನ ಪ್ಲಾಸ್ಟಿಕ್ ಬಾಟಲ್ ಬಳಕೆ ನಿಷೇಧಿಸಲಾಗುತ್ತಿದ್ದು, ಎರಡನೇ ಹಂತದಲ್ಲಿ ಟಿಟಿಡಿಯ ವಸತಿ ಗೃಹಗಳಲ್ಲಿ ತಂಗುವ ಭಕ್ತರಿಗೂ ಪ್ಲಾಸ್ಟಿಕ್ ಬಳಕೆ ಮಾಡದಂತೆ ಕಟ್ಟುನಿಟ್ಟಾಗಿ ಆದೇಶಿಸಲಾಗುತ್ತದೆ. ಅಲ್ಲದೆ ತಿರುಮಲದ ಎಲ್ಲಾ ಹೋಟೆಲ್ ಗಳ ಮಾಲೀಕರ ಸಭೆ ಕರೆದು ಪ್ಲಾಸ್ಟಿಕ್ ಬಾಟಲಿ ಬಳಕೆ ನಿಲ್ಲಿಸುವಂತೆ ಮನವೊಲಿಸಲಾಗುತ್ತದೆ.

Comments are closed.