ಕರ್ನಾಟಕ

ಓಡೋಡಿ ಬಂದ ಪ್ರೇಯಸಿಗೆ ತಾಳಿ ಕಟ್ಟಿದ ಕುರಿಗಾಹಿ

Pinterest LinkedIn Tumblr


ಚಿತ್ರದುರ್ಗ: ಓಡೋಡಿ ಬಂದ ಹುಡುಗಿ, ತಾಳಿ ಹಿಡಿದು ಕಾದು ನಿಂತ ಹುಡುಗ. ಹುಡುಗಿಯ ಕಣ್ಣಂಚಿನಲ್ಲಿ ಜಿನುಗಿದ ನೀರು. ಕ್ಷಣಾರ್ಧದಲ್ಲಿ ತಾಳಿ ಕಟ್ಟಿದ ಹುಡುಗ. ಇದ್ಯಾವುದು ಸಿನಿಮಾವೊಂದರ ಕ್ಲೈಮ್ಯಾಕ್ಸ್ ದೃಶ್ಯವಲ್ಲ. ಬದಲಿಗೆ ನೈಜವಾಗಿ ನಡೆದ ವಿವಾಹ ಪ್ರಸಂಗ.

ಹಿರಿಯೂರು ತಾಲೂಕು ಸೀಗೆಹಟ್ಟಿ ಗ್ರಾಮದ ಅರುಣ್ ಮತ್ತು ಅಮೃತಾ ಪ್ರೇಮ ವಿವಾಹವಾದ ಶೈಲಿಯಿದು. ತಾಳಿ ಕಟ್ಟಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಅಮೃತಾ ಎಂಎ ಪದವೀಧರೆಯಾಗಿದ್ದು, ಅರುಣ್ ಕುರಿಗಾಹಿಯಾಗಿದ್ದಾನೆ.

ಇಬ್ಬರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇದು ಪಾಲಕರಿಗೆ ತಿಳಿದು ಎರಡು ಕುಟುಂಬಗಳ ಮಧ್ಯೆ ಜಗಳಕ್ಕೆ ಕಾರಣವಾಗಿತ್ತು. ಮಾತ್ರವಲ್ಲದೆ ವಿವಾಹಕ್ಕೆ ನಿರಾಕರಿಸಿದ್ದರು.

ಹಬ್ಬದ ಹಿನ್ನಲೆಯಲ್ಲಿ ಊರಿಗೆ ಬಂದಿದ್ದ ಯುವತಿ ಕುರಿಹಟ್ಟಿಗೆ ಬಂದಿದ್ದರು. ಅಲ್ಲಿ ಮೊದಲೇ ಕಾಯುತ್ತಿದ್ದ ಅರುಣ್ ಆಕೆ ಬರುತ್ತಿದ್ದಂತೆ ತಾಳಿ ಕುರಿ ಮೇಯಿಸುವ ಸ್ಥಳದಲ್ಲೇ ತಾಳಿಕಟ್ಟಿದ್ದಾನೆ. ಈ ಸಿನಿಮಾ ಮಾದರಿ ವಿವಾಹ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Comments are closed.