ಕರ್ನಾಟಕ

ಸರ್ಕಾರಿ ಶಾಲಾ ಮಕ್ಕಳಿಗೆ ಬೆಳಗಿನ ಉಪಾಹಾರ ಯೋಜನೆ

Pinterest LinkedIn Tumblr


ಬೆಂಗಳೂರು: ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆ ವಿದ್ಯಾರ್ಥಿಗಳಿಗೆ ಬೆಳಗಿನ ಉಪಹಾರ ನೀಡುವ ಯೋಜನೆಯಿದೆ. ನವೆಂಬರ್‌ ಅಂತ್ಯಕ್ಕೆ ಐದು ಲಕ್ಷ ವಿದ್ಯಾರ್ಥಿಗಳಿಗೆ ಉಪಾಹಾರ ತಲುಪಿಸುವ ಗುರಿ ಹೊಂದಿದ್ದೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ಹೇಳಿದರು. ನಗರದ ಎನ್‌.ಆರ್‌.ಕಾಲೋನಿಯ ಶ್ರೀರಾಮ ಮಂದಿರದಲ್ಲಿ ತ್ಯಾಗರಾಜ ಕೋ-ಆಪರೇಟಿವ್‌ ಬ್ಯಾಂಕ್‌ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮ ದಲ್ಲಿ ಶ್ರೀ ತ್ಯಾಗರಾಜ ಬಾಲ ವಿಕಾಸ ಉಳಿತಾಯ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

ಶ್ರೀ ಸತ್ಯಸಾಯಿ ಅನ್ನಪೂರ್ಣ ಯೋಜನೆಯಡಿಯಲ್ಲಿ ಈಗಾಗಲೇ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 2 ಲಕ್ಷ ವಿದ್ಯಾರ್ಥಿಗಳಿಗೆ ಬೆಳಗಿನ ಉಪಹಾರ ನೀಡಲಾಗುತ್ತಿದೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ ಯೋಜನೆ ಚಾಲನೆಯಲ್ಲಿದೆ. ಮಕ್ಕಳು ಊಟವಿಲ್ಲದೆ ಹಸಿದು ಶಾಲೆಗೆ ಬರಬಾರದೆಂಬುದು ಸರ್ಕಾರದ ಉದ್ದೇಶ ಎಂದರು. ಸಮಾಜದಲ್ಲಿ ಹೆಚ್ಚುತ್ತಿರುವ ಕೊಳ್ಳುಬಾಕ ಸಂಸ್ಕೃತಿಗೆ ಕಡಿವಾಣ ಹಾಕಲು ಬಾಲ ವಿಕಾಸ ಉಳಿತಾಯ ಯೋಜನೆ ಉಪಕಾರಿಯಾಗಲಿದೆ.

ಶಾಲಾ ಮಕ್ಕಳು ವಿದ್ಯಾರ್ಥಿ ದಿಸೆಯಿಂದಲೇ ಉಳಿತಾಯ ಮಾಡು ವಂತಹ ಮನೋಭಾವ ಬೆಳೆಸಲು ಶ್ರೀ ತ್ಯಾಗರಾಜ ಕೋ-ಆಪರೇಟಿವ್‌ ಬ್ಯಾಂಕ್‌ ಮುಂದಾಗಿದೆ ಎಂದು ಶ್ಲಾ ಸಿದರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಮಾತನಾಡಿ, ಮೆಕಾಲೆ ಇಂಗ್ಲಿಷ್‌ ಶಿಕ್ಷಣ ವಿದ್ಯಾರ್ಥಿಗಳಲ್ಲಿ ಕೀಳರಿಮೆ ಮತ್ತು ಗುಲಾಮತನ ಸೃಷ್ಟಿಸುತ್ತಿದೆ. ಆದ್ದರಿಂದ ಕನ್ನಡದ ಮೂಲಕ ಯೋಚಿಸಿ, ಚಿಂತನೆ ನಡೆಸಿದರೆ ಅದ್ಭುತ ಯಶಸ್ಸು ಪಡೆಯಬಹುದು ಎಂದರು. ಶಾಸಕ ರವಿ ಸುಬ್ರಹ್ಮಣ್ಯ, ಬ್ಯಾಂಕ್‌ನ ಅಧ್ಯಕ್ಷ ಡಾ. ಎಂ.ಆರ್‌. ವೆಂಕಟೇಶ್‌ ಇದ್ದರು.

ಬಾಲವಿಕಾಸ ಉಳಿತಾಯ ಯೋಜನೆ: ನಗರದಲ್ಲಿ ನಮ್ಮ ಬ್ಯಾಂಕ್‌ನ ಒಟ್ಟು 12 ಶಾಖೆಗಳಿವೆ. ಈ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೂ ಯೋಜನೆಯನ್ನು ವಿಸ್ತರಿಸಲಾಗುವುದು. ಈಗಾಗಲೇ ಯೋಜನೆಯಡಿ ಎರಡು ಸಾವಿರ ವಿದ್ಯಾರ್ಥಿಗಳನ್ನು ನೋಂದಣಿ ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ಮನಿ ಬ್ಯಾಗ್‌ ಕಿಟ್‌ ವಿತರಿಸಲಾಯಿತು.

ಮನೆಯಲ್ಲಿ ವಿದ್ಯಾರ್ಥಿಗಳಿಗೆ ಖರ್ಚಿಗೆ ನೀಡಿದ ಹಣದಲ್ಲಿ, ಉಳಿದ ಹಣವನ್ನು ಈ ಕಿಟ್‌ನಲ್ಲಿ ವಿದ್ಯಾರ್ಥಿಗಳು ಸಂಗ್ರಹಿಸಬೇಕು. ನಮ್ಮ ಸಿಬ್ಬಂದಿ ತಿಂಗಳ ಕೊನೆಯಲ್ಲಿ ಪ್ರತಿ ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿ, ಈ ಹಣ ಸಂಗ್ರಹಿಸಿ, ವಿದ್ಯಾರ್ಥಿಗಳ ಹೆಸರಲ್ಲಿ ತೆರೆಯಲಿರುವ ಶೂನ್ಯ ಉಳಿತಾಯ ಖಾತೆಗೆ ಜಮೆ ಮಾಡಲಾಗುತ್ತದೆ. ವರ್ಷಕ್ಕೆ ಶೇ.6ರಷ್ಟು ಬಡ್ಡಿ ಪಾವತಿ ಮಾಡಲಾಗು ತ್ತದೆ. ವಿದ್ಯಾರ್ಥಿಗಳು ಪಿಯುಸಿ ನಂತರ ಉನ್ನತ ಶಿಕ್ಷಣ ಪಡೆಯಲು ವಿದ್ಯಾರ್ಥಿ ಸಾಲಕ್ಕೆ ಅರ್ಜಿ ಸಲ್ಲಿಸಿದರೆ, ಖಾತ್ರಿ ಪಡೆಯದೆ ಶೀಘ್ರದಲ್ಲಿ ಸಾಲ ನೀಡಲಾಗುವುದು.

ವಿದ್ಯಾರ್ಥಿ ಮಾದರಿ: ಖಾಸಗಿ ಟಿವಿ ವಾಹಿನಿಯಲ್ಲಿ ನಟ ಪುನೀತ್‌ ರಾಜ್‌ಕುಮಾರ್‌ ನಡೆಸಿಕೊಡುವ ಕನ್ನಡದ ಕೋಟ್ಯಾ ಧಿಪತಿ ಕಾರ್ಯಕ್ರಮದಲ್ಲಿ 6.4 ಲಕ್ಷ ರೂ. ನಗದು ಗೆದ್ದ ಹಾಸನ ಜಿಲ್ಲೆ ಕೆ.ಎನ್‌.ತೇಜಸ್‌ ಎಲ್ಲರಿಗೂ ಮಾದರಿಯಾಗಬೇಕು ಎಂದು ಆ ವಿದ್ಯಾರ್ಥಿಯ ಸಾಧನೆಯನ್ನು ಸಚಿವರು ಶ್ಲಾ ಸಿದರು. ಈ ವಿದ್ಯಾರ್ಥಿ ತಮ್ಮ ಶಾಲೆಯ ಕಾಂಪೌಂಡ್‌ ನಿರ್ಮಾಣಕ್ಕೆ ಹಣ ನೀಡಲು ಮುಂದಾಗಿದ್ದ. ಆದರೆ, ಸ್ಥಳೀಯ ಜಿಪಂ ಸಿಇಒರೊಂದಿಗೆ ಮಾತನಾಡಿ, ತೇಜಸ್‌ ಗೆದ್ದಿರುವ ಹಣವನ್ನು ಆತನ ಶಿಕ್ಷಣಕ್ಕೆ ಬಳಸಲಿ. ಶಾಲೆ ಕಾಂಪೌಂಡ್‌ ಅನ್ನು ಮಹಾತ್ಮ ಗಾಂ ಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನಿರ್ಮಿಸುವಂತೆ ಸೂಚಿಸಿದ್ದೇನೆ ಎಂದರು.

ಶಾಲಾ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಬಾಲ ವಿಕಾಸ ಉಳಿತಾಯ ಯೋಜನೆ ಯನ್ನು ರಾಜ್ಯದ ಎಲ್ಲ ಶಾಲೆಗಳಲ್ಲೂ ಜಾರಿಗೆ ಕ್ರಮ ಕೈಗೊಳ್ಳುವಂತೆ ಅ ಕಾರಿಗಳಿಗೆ ಸೂಚಿಸಲಾಗುವುದು.
-ಎಸ್‌.ಸುರೇಶ್‌ ಕುಮಾರ್‌, ಸಚಿವ

Comments are closed.