ಕರ್ನಾಟಕ

ಬಾಲ ತ್ರಿಪುರ ಸುಂದರಿ ಅಮ್ಮನವರಿಗೆ 10 ಲಕ್ಷ ರೂ. ನೋಟಿನ ಅಲಂಕಾರ!

Pinterest LinkedIn Tumblr


ಮೈಸೂರು: ಸಂಭ್ರಮದ ದೀಪಾವಳಿ ಹಿನ್ನೆಲೆ ಮೈಸೂರಿನಲ್ಲಿ ಆಚರಣೆ ಜೋರಾಗಿದೆ. ಇನ್ನು ಅಮಾವಾಸ್ಯೆಯಾದ ಕಾರಣ ಇಂದು ದಿವಾನ್ಸ್ ರಸ್ತೆಯ ಅಮೃತೇಶ್ವರ ದೇವಸ್ಥಾನದಲ್ಲಿ ಬಾಲ ತ್ರಿಪುರ ಸುಂದರಿ ಅಮ್ಮನವರಿಗೆ ನೋಟುಗಳ ಅಲಂಕಾರ ಮಾಡಲಾಗಿತ್ತು.

ದೇವಿಯನ್ನು ವಿವಿಧ ಮುಖಬೆಲೆಯ ನೋಟುಗಳನ್ನು ಬಳಸಿ ಶೃಂಗಾರ ಮಾಡಲಾಗಿತ್ತು. ಪ್ರತಿವರ್ಷವೂ ಇದೇ ದಿನದಂದು ದೇವಿಗೆ ವಿವಿಧ ಬಗೆಯ ನೋಟುಗಳು ಹಾಗೂ ನಾಣ್ಯಗಳಿಂದ ವಿಶೇಷ ಅಲಂಕಾರ ಮಾಡುವ ಸಂಪ್ರದಾಯವನ್ನು ನಡೆಸಿಕೊಂಡು ಬರಲಾಗಿದೆ.

ಈ ದೇವಿಗೆ ಅಲಂಕಾರ ಮಾಡುವ ವಿಧಾನವೇ ಒಂದು ವಿಶೇಷ. ಇಲ್ಲಿ ನಡೆಸಿಕೊಂಡು ಬಂದಿರುವ ಅಲಂಕಾರ ಪದ್ಧತಿಯೇ ಭಕ್ತರ ಕಣ್ಮನಗಳನ್ನು ಸೆಳೆಯುವಂತೆ ಇರುತ್ತದೆ. ಈ ಬಾರಿ ಬರೋಬ್ಬರಿ 10 ಲಕ್ಷ ರೂಪಾಯಿ ಮೌಲ್ಯದ ವಿವಿಧ ಮುಖಬೆಲೆಯ ನೋಟುಗಳನ್ನು ಬಳಸಿ ನಯನ ಮನೋಹರವಾಗಿ ಅಲಂಕರಿಸಲಾಗಿದೆ.

ಇಷ್ಟು ಬೃಹತ್‌ ಮೌಲ್ಯದ ಹಣ ಎಲ್ಲಿಂದ ಬಂತೆಂಬ ಅನುಮಾನ ಬರಬಹುದು. ಈ ಎಲ್ಲ ನೋಟುಗಳನ್ನು ದೇವಿಯ ಭಕ್ತರಿಂದಲೇ ಸಂಗ್ರಹಿಸಲಾಗಿದೆ.

ಕಳೆಗುಂದಿದ ಪಟಾಕಿ ಉದ್ಯಮ
ಈ ಬಾರಿ ಮಳೆ ಹಿಡಿದಿರುವ ಕಾರಣ ಮೈಸೂರಿನಲ್ಲಿ ಪಟಾಕಿ ಉದ್ಯಮ ಕಳೆಗುಂಡಿದೆ . ಕಳೆದ ವರ್ಷಕ್ಕೆ ಹೋಲಿಸಿದರೆ ಮಳೆಯ ಕಾರಣದಿಂದ ಜನರು ಪಟಾಕಿಯ ಮಳಿಗೆಗಳತ್ತ ಮುಖ ಮಾಡುತ್ತಿಲ್ಲ ಎಂಬುದು ವ್ಯಾಪಾರಿಗಳ ಅಳಲು. ಅಲ್ಲದ ವರ್ಷಧಾರೆಯಿಂದಾಗಿ ಪೂಜೆಗೆ ಬೇಕಾದ ಹೂವಿನ ದರವು ಕುಸಿತ ಕಂಡಿರಿವುದು ರೈತರ ಕಣ್ಣಿಗೆ ಮಣ್ಣೆರಚಿದಂತಾಗಿದೆ.

Comments are closed.