ಕರ್ನಾಟಕ

ಜೋಗ್‌ ಫಾಲ್ಸ್‌ ಎಸ್‌ಬಿಐ ಬ್ಯಾಂಕ್ ಬ್ರಾಂಚ್ ಮ್ಯಾನೇಜರ್ ನೇಣು ಬಿಗಿದುಕೊಂಡು ಆತ್ಮಹತ್ಯೆ

Pinterest LinkedIn Tumblr


ಶಿವಮೊಗ್ಗ: ಜೋಗ್ ಫಾಲ್ಸ್ ಎಸ್ ಬಿಐ ಬ್ರಾಂಚ್ ಮ್ಯಾನೇಜರ್ ಅನೀಲ್ ಕುಮಾರ್(,35 )ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲಸದ ಒತ್ತಡದಿಂದಾಗಿ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಕಳೆದ ಎರಡು ದಿನಗಳಿಂದ ರಜೆಯಲ್ಲಿದ್ದ ಅನಿಲ್ ಕುಮಾರ್ ಶನಿವಾರ ಬೆಳಗ್ಗೆ ಬ್ಯಾಂಕಿಗೆ ಬಂ ದಿದ್ದಾರೆ. ಬ್ಯಾಂಕಿನ ಬಾಗಿಲು ತೆರೆಸಿ ಮತ್ತೆ ಮನೆಗೆ ವಾಪಸ್ಸಾಗಿದ್ದರು. ಮನೆಯಲ್ಲಿದ್ದ ಪತ್ನಿಯನ್ನು ಏನೋ ನೆಪ ಹೇಳಿ ಹೊರಗೆ ಕಳಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜೋಗ್ ಪಾಲ್ಸ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Comments are closed.