ಕರ್ನಾಟಕ

ರಾಜ್ಯದ ಎಲ್ಲ ಹೆದ್ದಾರಿಗಳಲ್ಲೂ ಏಕರೂಪದ ಟೋಲ್ ಸಂಗ್ರಹ ವ್ಯವಸ್ಥೆ ಶೀಘ್ರದಲ್ಲೇ ಜಾರಿಗೆ

Pinterest LinkedIn Tumblr

ಬೆಂಗಳೂರು : ದೇಶದಲ್ಲಿ 2020 ಕ್ಕೆ ಏಕರೂಪದ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2020 ರ ಏಪ್ರಿಲ್ 1 ರಿಂದ ದೇಶದ ಎಲ್ಲ ರಾಜ್ಯಗಳ ಹೆದ್ದಾರಿಗಳಲ್ಲೂ ವ್ಯವಸ್ಥೆ ಜಾರಿಗೆ ಬರಲಿದೆ. ಇದರಿಂದ ಟೋಲ್ ಗಳಲ್ಲಿ ಕಾಯುವಿಕೆಯಿಂದ ಸಮಯ ವ್ಯರ್ಥವಾಗುವ ಹಾಗೂ ಪರಿಸರ ಸಂಬಂಧಿ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ ಎಂದು ತಿಳಿಸಿದರು.

ರಾಜ್ಯ ಹೆದ್ದಾರಿ ವ್ಯಾಪ್ತಿಯ 32 ರಾಜ್ಯ ಹೆದ್ದಾರಿಗಳಲ್ಲಿ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಗೆ ಬರಲಿದೆ. ಕೇಂದ್ರವು ಶೇ. 50 ಬಂಡವಾಳ, ನಿರ್ವಹಣೆಗೆ ಶೇ. 80 ವೆಚ್ಚ ಭರಿಸಲಿದೆ. 2020 ರ ಏಪ್ರಿಲ್ 1 ರಿಂದ ದೇಶ ಎಲ್ಲ ವಾಣಿಜ್ಯ ವಾಹನಗಳಿಗೆ ಜಿಎಸ್ ಟಿ ಇ-ವೇ ಬಿಲ್ ಗಳ ವ್ಯವಸ್ಥೆಯನ್ನು ಫಾಸ್ಟ್ ಟ್ಯಾಗ್ ನೊಂದಿಗೆ ಸೇರಿಸಲಾಗುತ್ತಿದೆ ಎಂದು ತಿಳಿಸಿದರು.

Comments are closed.