ಕರ್ನಾಟಕ

ಮಲ್ಲಂದೂರುಲ್ಲಿ ಒಂಟಿ ಸಲಗದ ಹಾವಳಿ : ಜನರಲ್ಲಿ ಹೆಚ್ಚಿದ ಭೀತಿ

Pinterest LinkedIn Tumblr

ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಆಗುಂಬೆ ಭಾಗದಲ್ಲಿ ಒಂಟಿ ಸಲಗದ ಹಾವಳಿ ಇತ್ತೀಚೆಗೆ ಹೆಚ್ಚಳವಾಗಿದ್ದು, ಊರೊಳಗೆ ನುಗ್ಗುತ್ತಿರುವ ಆನೆಯಿಂದಾಗಿ ಊರವರು ಭೀತಿಯ ಜೀವನ ನಡೆಸುತ್ತಿದ್ದಾರೆ.

ಆಗುಂಬೆ, ಮಲ್ಲಂದೂರು ಭಾಗದಲ್ಲಿ ಪ್ರತಿದಿನವೂ ಈ ಒಂಟಿ ಸಲಗ ಕಾಣಿಸಿಕೊಳ್ಳುತ್ತಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ. ಊರಿನ ಮನೆಗಳ ಬಳಿ ಆನೆ ಲಗ್ಗೆ ಇಡುತ್ತಿದ್ದು, ಆಗುಂಬೆಯ ಕೆನರಾ ಬ್ಯಾಂಕ್ ಹಿಂಭಾಗದಲ್ಲಿ ಕಾಣಿಸಿಕೊಂಡು ಆತಂಕ ಮೂಡಿಸಿದೆ.

ಈ ಬಾರಿಯ ಮಳೆಗಾಲದ ಆರಂಭದಲ್ಲಿ ಕಾಣಿಸಿಕೊಂಡಿದ್ದ ಒಂಟಿ ಸಲಗ ಅಡಿಕೆ, ಬಾಳೆ ತೋಟಗಳನ್ನು ಧ್ವಂಸ ಮಾಡಿತ್ತು. ಈಗ ಮತ್ತೆ ಕಾಣಿಸಿಕೊಂಡಿದ್ದು ಬಾಕಿ ಇರುವ ಬೆಳೆಯನ್ನೂ ಈ ಆನೆಯ ಉಪದ್ರದಿಂದಾಗಿ ಕಳೆದುಕೊಳ್ಳುವ ಭೀತಿಯಲ್ಲಿ ರೈತರಿದ್ದಾರೆ.

ಈ ಭಾಗದಲ್ಲಿ ಆಗಾಗ ಆನೆಯು ತನ್ನ ಇರುವಿಕೆಯನ್ನು ತೋರ್ಪಡಿಸುತ್ತಿದ್ದರೂ. ಅನೇಕ ದೂರಿನ ನಂತರವೂ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

Comments are closed.