
ಹುಬ್ಬಳ್ಳಿ: ಪ್ರವಾಸ ವೀಸಾದಡಿ ಹುಬ್ಬಳ್ಳಿಗೆ ಆಗಮಿಸಿ, ಮಸಾಜ್ ದಂಧೆ ಮೂಲಕ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದ ಥೈಲ್ಯಾಂಡ್ ದೇಶದ ಮೂವರು ಮಹಿಳೆಯರನ್ನು ಗೋಕುಲ ರಸ್ತೆ ಠಾಣೆ ಪೊಲೀಸರು ಶನಿವಾರ ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಬಂಧಿತ ಮಹಿಳೆಯರು ಗೋಕುಲ ರಸ್ತೆಯ ಅರ್ಬನ್ ಓಯಾಸಿಸ್ ಮಾಲ್ ನ ಥೈ ದಿ ಫ್ಯಾಮಿಲಿ ಸಲೂನ್ ಆ್ಯಂಡ್ ಸ್ಪಾವೊಂದರಲ್ಲಿ ಮಸಾಜ್ ನೆಪದಲ್ಲಿ ಗ್ರಾಹಕರೊಂದಿಗೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದರು ಎಂದು ಆರೋಪಿಸಲಾಗಿದೆ.
ಪ್ರವಾಸ ವೀಸಾದ ಮೇಲೆ ಬಂದಿದ್ದ ಇವರು ಉದ್ಯೋಗದಲ್ಲಿ ತೊಡಗಿದ ಅಪರಾಧದಡಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
Comments are closed.