ಕರ್ನಾಟಕ

ಮಹೀಷ ದಸರಾ ಆಚರಣೆಗೆ ವಿರೋಧ: ಪ್ರತಾಪ್ ಸಿಂಹರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದ ಪ್ರಗತಿಪರರು

Pinterest LinkedIn Tumblr


ಮೈಸೂರು: ಮೈಸೂರಿನಲ್ಲಿ ತೀವ್ರ ವಿರೋಧದ ನಡುವೆಯೂ ವಿವಿಧ ಪ್ರಗತಿಪರ ಚಿಂತಕರು ಮಹೀಷ ದಸರಾ ಆಚರಣೆ ಮಾಡಿದ್ದಾರೆ. ಮೈಸೂರಿನ ಅಶೋಕ ಪುರಂನಲ್ಲಿರುವ ಅಂಬೇಡ್ಕರ್ ಪಾರ್ಕ್‌ನಲ್ಲಿ ಮಹೀಷ ದಸರಾ ಆಚರಣೆ ಮಾಡುತ್ತಿದ್ದು, ಅಂಬೇಡ್ಕರ್ ಪ್ರತಿಮೆಗೆ ಹಾಗೂ ಮಹಿಷಾಸುರನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಇನ್ನು ಇದೇ ವೇಳೆ ಪ್ರತಾಪ್ ಸಿಂಹ ವಿರುದ್ಧ ಸಿಡಿದೆದ್ದ ಪ್ರಗತಿಪರರು ಪ್ರತಾಪ್ ಸಿಂಹ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು, ಬಿಜೆಪಿ ಮತ್ತು ಪ್ರತಾಪ್ ಸಿಂಹ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ.

ಮಹೀಷ ದಸರಾದಲ್ಲಿ ಬಾಗವಹಿಸಿರುವ ಪ್ರೋ. ಮಹೇಶ್‌ಚಂದ್ರ ಗುರು ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದ್ದು, ಚಾಮುಂಡಿಬೆಟ್ಟದಲ್ಲಿ ಮಹಿಷ ದಸರಾ ವೇದಿಕೆ ತೆರವುಗೊಳಿಸಿದ್ದಾರೆ. ಸಂಸದ ಪ್ರತಾಪ್ ಸಿಂಹ ಮಹಿಷಾ ದಸರಾ ಮಾಡಬಾರದೆಂದು ಹೀಗೆ ಮಾಡಿದ್ದಾರೆ. ಇದು ಸಂಸದರ ಪುಂಡಾಟ ಅಂತ ನಾನು ಕರೆಯಬೇಕಾಗುತ್ತೆ. ಪ್ರತಾಪ್ ಸಿಂಹ ಯಾರು ಡಿಸಿನಾ.? ಎಸ್ಪಿನಾ.? ಹೋಂ ಮಿನಿಸ್ಟರ್.? ಇಲ್ಲ ಚೀಫ್ ಆಫ್ ಪೊಲೀಸಾ.? ಆತ ಒಬ್ಬ ಸಂಸದ. ಆದ್ರೆ ಇವತ್ತು ಬೀದಿ ಗೂಂಡಾ ಅಂತ ಪ್ರೂವ್ ಮಾಡ್ಕೊಂಡ್ ಬಿಟ್ಟರು. ಇಂಥಾ ಗೂಂಡಾಗಿರಿಗೆ ನಾವು ಬಗ್ಗಲ್ಲ ಎಂದಿದ್ದಾರೆ.

ಪ್ರತಾಪ್ ಸಿಂಹ ಅಪ್ಪನದಲ್ಲ ಈ ಪ್ರಜಾಪ್ರಭುತ್ವ. ಪ್ರತಾಪ್ ಸಿಂಹನ ಅವ್ವನದಲ್ಲ ಈ ಮಹಿಷಾ ಸಂಸ್ಕೃತಿ. ಈ ಹಬ್ಬ ನಮ್ದು. ಈ ಸಂಸ್ಕೃತಿ ನಮ್ದು. ಪ್ರತಾಪ್ ಸಿಂಹ ಒಬ್ಬ ಮೂಲಭೂತವಾದಿ ರಾಜಕಾರಣಿ. ಪ್ರತಾಪ್ ಸಿಂಹನ ರಾಜಕೀಯವಾಗಿ ಮೂಲೋತ್ಪಾದನೆ ಮಾಡಲು ಈ 144 ಸೆಕ್ಷನ್ ಜಾರಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸಂಸದ ಪ್ರತಾಪ್ ಸಿಂಹನಿಗೆ ಪಾಠ ಕಲಿಸಬೇಕಾಗುತ್ತದೆ.

ಪೊಲೀಸರು ಪ್ರೊ.ಭಗವಾನ್ ಅವರನ್ನು ಮನೆಯಿಂದ ಹೊರಗೆ ಬರದಂತೆ ನೋಡಿಕೊಂಡಿದ್ದಾರೆ. ನಾನು ಮನೆ ಒಳಗೆ ಹೋಗಿದ್ರೆ ನನ್ನು ಅಲ್ಲೇ ಕೂಡಿ ಹಾಕ್ತಿದ್ರು. ನಾನು ದಡ್ಡಾನಾ ಮನೆ ಒಳಗೆ ಹೋಗಲು. ಇದು ಒಬ್ಬ ವ್ಯಕ್ತಿ ಮುಖ್ಯ ಅಲ್ಲ. ಇದು ಜನರ ಹಬ್ಬ ಎಲ್ಲರ ಹಿತ ಮುಖ್ಯ ಎಂದು ಪ್ರತಾಪ್ ಸಿಂಹ ವಿರುದ್ಧ ಪ್ರೊ.ಮಹೇಶ್ ಚಂದ್ರ ಗುರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments are closed.