ಕರ್ನಾಟಕ

ಸಿದ್ದರಾಮಯ್ಯ ಮಗನ ಸಾವಿಗೆ ಭೈರತಿ ಸುರೇಶ್ ಕಾರಣ

Pinterest LinkedIn Tumblr


ಬೆಂಗಳೂರು: ಅನರ್ಹ ಶಾಸಕ ಎಂ.ಟಿ.ಬಿ ನಾಗರಾಜ್ ಮಾತನಾಡಿದ್ದು, ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಹೊರಿಸಿರುವ ಆರೋಪ ಶುದ್ದ ಸುಳ್ಳು. ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಬರುವ ಮುನ್ನವೇ ನಾನು ಶಾಸಕನಾಗಿದ್ದೆ. ಎಸ್.ಎಂ.ಕೃಷ್ಣ ನನಗೆ ಟಿಕೆಟ್ ನೀಡಿದ್ದು, ಸಿದ್ದರಾಮಯ್ಯ ಅಲ್ಲ ಎಂದಿದ್ದಾರೆ.

ನನ್ನ ಬಗ್ಗೆ ಮಾತನಾಡುವ ನೈತಿಕತೆ ಸಿದ್ದರಾಮಯ್ಯಗೆ ಇಲ್ಲ. ಕಾಂಗ್ರೆಸ್ ಪಕ್ಷದ ಯಾವೊಬ್ಬ ನಾಯಕ ಕೂಡ ನನ್ನ ಬಗ್ಗೆ ಮಾತನಾಡುವ ಹಕ್ಕಿಲ್ಲ. ಎಲ್ಲರ ಬಂಡವಾಳ ನನಗೆ ಗೊತ್ತಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕುರುಬರನ್ನ ಗಣನೆಗೆ ತೆಗೆದುಕೊಂಡಿಲ್ಲ. ಸಿದ್ದರಾಮಯ್ಯ, ರಮೇಶ್ ಕುಮಾರ್, ಕೃಷ್ಣ ಭೈರೇಗೌಡ ಯಾವ ಪಕ್ಷದಿಂದ ಬಂದಿದ್ದಾರೆ..? ಅವರೂ ಕೂಡಾ ಬೇರೆ ಕಡೆ ಮದುವೆಯಾಗಿ ಕಾಂಗ್ರೆಸ್‌ಗೆ ಬಂದು ಸಂಸಾರ ಮಾಡುತ್ತಿದ್ದಾರೆ ಎಂದು ಬಿ.ಎಸ್.ಸುರೇಶ್ ಬಡ್ಡಿ ವಸೂಲಿ ಆರೋಪಕ್ಕೆ ಎಂ.ಟಿ.ಬಿ ನಾಗರಾಜ್ ತಿರುಗೇಟು ನೀಡಿದ್ದಾರೆ.

ರಾಜಕೀಯದಲ್ಲಿ ಅವನು ಬಚ್ಚಾ ಅವನ ಬಂಡವಾಳ ನನಗೆ ಗೊತ್ತು. ಸಿದ್ದರಾಮಯ್ಯ ಮಗ ರಾಕೇಶ್ ಸಿದ್ದರಾಮಯ್ಯ ಸಾವನ್ನಪ್ಪಲು ಬೈರತಿ ಸುರೇಶ್ ನೇರ ಕಾರಣ. ರಾಕೇಶ್ ಸಿದ್ದರಾಮಯ್ಯನನ್ನು ಹಾಳು ಮಾಡಿದ್ದೇ ಭೈರತಿ ಸುರೇಶ್ . ಇನ್ನು ನೂರು ವರ್ಷ ಬದುಕಿ ಬಾಳಬೇಕಿದ್ದವನ್ನ ಸಾಯಿಸಿದ್ದು ನನಗೆ ಗೊತ್ತಿದೆ ಎಂದು ನಾಗರಾಜ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Comments are closed.