ಕರ್ನಾಟಕ

ಪೊಲಿಯೋ ಲಸಿಕೆಯಲ್ಲಿ ವೈರಸ್: ಇಂತಹ ಸುಳ್ಳುಸುದ್ದಿ ನಂಬದಂತೆ ಮನವಿ

Pinterest LinkedIn Tumblr


ಬೆಂಗಳೂರು: “ದಯಮಾಡಿ ಬೇಗ ಶೇರ್ ಮಾಡಿ, ನಾಳೆ 5 ವರ್ಷದ ಒಳಗೆ ಇರುವ ಮಕ್ಕಳಿಗೆ ಪೊಲಿಯೋ ಕೊಡಿಸಬೇಡಿ. ಅದರಲ್ಲಿ ವೈರಸ್ ಬೆರೆಸಿರುತ್ತದೆ. ಪೊಲಿಯೋ ತಯಾರು ಮಾಡಿದ ಆ ಕಂಪನಿ ಯಜಮಾನರನ್ನು ಅರೆಸ್ಟ್ ಮಾಡಿದ್ದಾರೆ. ದಯಮಾಡಿ ಎಲ್ಲರಿಗೂ ತುರ್ತು ಶೇರ್ ಮಾಡಿ. ಇದು, ಸತ್ಯ..ಸತ್ಯ…ಸತ್ಯ….” ಎಂಬ ಬರೆಹವೊಂದು ಕಳೆದ ಎರಡು ಮೂರು ದಿನದಿಂದ ಮೂರು ದಿನದಿಂದ ಎಲ್ಲರ ವಾಟ್ಸಾಪ್​ನಲ್ಲಿ ಹರಿದಾಡುವ ಮೂಲಕ ಎಲ್ಲರಲ್ಲೂ ಆತಂಕ ತಂದೊಡ್ಡಿದೆ.

ಆದರೆ, ವಾಟ್ಸಾಪ್​ನಲ್ಲಿ ಹರಿದಾಡುತ್ತಿರುವುದು ಸುಳ್ಳು ಸುದ್ದಿ, ಇಂತಹ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕರು ಮನವಿ ಮಾಡಿದ್ದಾರೆ. ಜೊತೆಗೆ ಎಲ್ಲ ಜಿಲ್ಲೆಗಳ ಉಪನಿರ್ದೇಶಕರು ಆರೋಗ್ಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಅಂಗನವಾಡಿ ಫಲಾನುಭವಿಗಳಿಗೆ, ಪೋಷಕರಿಗೆ ತಿಳಿಸಲು ಸೂಕ್ತ ಕ್ರಮ ವಹಿಸಲು ಎಲ್ಲ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ, ಮೇಲ್ವಿಚಾರಕಿಯರಿಗೆ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಸೂಚನೆ ನೀಡಲು ಜಿಲ್ಲಾ ಉಪನಿರ್ದೇಶಕರಿಗೆ ಆದೇಶ ನೀಡಿದ್ದಾರೆ.

Comments are closed.