ಕರ್ನಾಟಕ

ಉಪಚುನಾವಣೆಗೆ ತಡೆಕೋರಿ ಸುಪ್ರೀಂ ಮೊರೆ ಹೋಗಲು ಅನರ್ಹರ ನಿರ್ಧಾರ…!!

Pinterest LinkedIn Tumblr


ಗಾಯದ ಮೇಲೆ ಬರೆ ಎಳೆದಂಗೆ ರಾಜ್ಯದಲ್ಲಿ ಅನರ್ಹರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅನರ್ಹ ಶಾಸಕರು ಪ್ರತಿನಿಧಿಸುವ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದ್ದು ಅನರ್ಹರಿಗೆ ತಮ್ಮ ರಾಜಕೀಯ ಭವಿಷ್ಯ ಅತಂತ್ರವಾಗುವ ಭೀತಿ ಎದುರಾಗಿದೆ. ಈ ಮಧ್ಯೆ ಉಪಚುನಾವಣೆ ಗೆ ತಡೆ ಕೋರಲು ಅನರ್ಹರು ಸರ್ಕಸ್ ಆರಂಭಿಸಿದ್ದಾರೆ.

ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಚುನಾವಣೆ ಆಯೋಗ 15 ಅನರ್ಹ ಶಾಸಕರ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಿಸಿದೆ. ಇದು ಅನರ್ಹರ ಪಾಲಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದ್ದು, ಸುಪ್ರೀಂನಲ್ಲಿ ಸ್ಪೀಕರ್ ಆದೇಶಕ್ಕೆ ತಡೆಯೂ ಸಿಗದೇ ಇರೋದರಿಂದ ಅನರ್ಹರು ಚುನಾವಣೆ ಎದುರಿಸಲಾಗದ‌ ಸ್ಥಿತಿಯಲ್ಲಿದ್ದಾರೆ. ಇದೀಗ ಉಪಚುನಾವಣೆ ಘೋಷಣೆಯಾಗಿರೋದರಿಂದ ಸಂಕಷ್ಟ ತಪ್ಪಿಸಿಕೊಳ್ಳಲು ಅನರ್ಹರು ಸುಪ್ರೀಂ ಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ.

ಈ ಬಗ್ಗೆ ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅನರ್ಹ ಶಾಸಕ ಡಾ.ಸುಧಾಕರ್, ಸೋಮವಾರ ಅನರ್ಹ ಶಾಸಕರ ಅರ್ಜಿ ವಿಚಾರಣೆ ಸುಪ್ರೀಂ‌ಕೋರ್ಟ್ ನಲ್ಲಿದೆ. ಈ ವೇಳೆ ಉಪಚುನಾವಣೆಗೆ ತಡೆ ನೀಡುವಂತೆ ನಮ್ಮ ಪರ ವಕೀಲರು ಸುಪ್ರೀಂ ಕೋರ್ಟ್ ಗೆ ಮನವಿ ಮಾಡಲಿದ್ದಾರೆ ಎಂದರು.

ಈಗ ಚುನಾವಣೆ ನಡೆದರೇ ನಮಗೆ ಅನ್ಯಾಯವಾಗುತ್ತದೆ. ಹೀಗಾಗಿ ನಮ್ಮ ಪ್ರಕರಣದ ತೀರ್ಪು ಬರುವರೆಗೂ ಉಪಚುನಾವಣೆ ನಡೆಸದಂತೆ ಕೇಂದ್ರ‌ಚುನಾವಣಾ ಆಯೋಗಕ್ಕೆ‌ ನಿರ್ದೇಶನ ನೀಡುವಂತೆ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಲಾಗುತ್ತದೆ ಎಂದರು.
ಒಟ್ಟಿನಲ್ಲಿ ಕೇಂದ್ರ ಚುನಾವಣಾ ಆಯೋಗದ ಆದೇಶ ಅನರ್ಹರನ್ನು ಸಂಕಷ್ಟಕ್ಕೆ ದೂಡಿದ್ದು, ಅತ್ತ ಶಾಸಕ ಸ್ಥಾನವೂ ಇಲ್ಲ…ಇತ್ತ ಚುನಾವಣೆಯೂ ಇಲ್ಲ ಎಂಬಂತಾಗಿ ತ್ರಿಶಂಕು ಸ್ಥಿತಿ ತಲುಪಿದ್ದಾರೆ.

Comments are closed.