ಕರ್ನಾಟಕ

ಅವನ್ಯಾವನೋ ಮೋದಿ ಅಂತೆ ಮೋದಿ ಎಂದು ಹಿಯಾಳಿಸಿದ ಶಾಸಕ!

Pinterest LinkedIn Tumblr


ಹಾಸನ: ಹಾಸನದ ಅರಸಿಕೆರೆಗೆ ಕುಡಿಯುವ ನೀರಿನ ಶಂಕುಸ್ಥಾಪನೆಗಾಗಿ ಭೇಟಿ ನೀಡಿದ್ದ ಶಾಸಕ ಶಿವಲಿಂಗೇಗೌಡ, ಪ್ರಧಾನಿ ಮೋದಿ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

ಅದ್ಯಾವನ್ರಿ ಇತಿಹಾಸದಲ್ಲಿ ಇಷ್ಟು ಕೆಲಸ ಮಾಡೋಕ್ ಆಗುತ್ತೆ.? ಅವರ್ ಮನೆ ಹಾಳಾಗಾ ನೋಡಿ ಅದೆಂತದೊ. ಅವನ್ಯಾವನೋ ಮೋದಿ ಅಂತೆ ಮೋದಿ, ಹುಣಸೇಕಾಯಿ ಅಂತೆ ಬದನೆಕಾಯಿ ಅಂದ್‌ಕೊಂಡು ಓಟ್ ಹಾಕ್ತವ್ರಲ್ರಿ. ಶಿವಲಿಂಗೇಗೌಡ ಕೆಲಸ ಮಾಡಿಸ್ತಾವ್ನೆ. ಅವನು ಎಲ್ಲಿದ್ದಾನೆ ಅಲ್ಲಿಗೆ ಒಂದು ಓಟ್ ಎಸೀಬೇಕು ಅಷ್ಟೆ ಎಂದು ತಮ್ಮ ಭಾಷಾ ಶೈಲಿಯಲ್ಲಿ ಜನರಲ್ಲಿ ಮಾತನಾಡಿದ್ದಾರೆ.

ಅಲ್ಲದೇ, ಕೆಲಸ ಮಾಡಿ ತೋರಿಸಿಲ್ವ, ನಿಮ್ ಊರಿಗೆ ಒಂದು ಹನಿ ನೀರು ಬರ್ತಿತ್ತಾ?ಅದನ್ನ ನಾನು ಮಾಡಿಸ್ಲಿಲ್ವ? ಏನ್ ಮಾಡದು ಹತ್ತು ವರ್ಷ ನಮ್ಮ ಸರ್ಕಾರ ಬರಲೇ ಇಲ್ಲ. ಈಗೇನೋ ಒಂದು ಚೂರು ಉಸಿರಾಡನ ಅನ್ನುವಷ್ಟರಲ್ಲಿ ಸರ್ಕಾರನಾ ಢಮಾರ್ ಅನ್ಸುದ್ರು ಎಂದು ಅರಸೀಕೆರೆ ಭಾಷೆಯಲ್ಲಿ ಸ್ಥಳೀಯರ ಜೊತೆ ಮಾತನಾಡುವಾಗ ಬಿಜೆಪಿ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

ಕೊಟ್ಟ ಕೆಲಸ ಮಾಡುವೆ- ಸಚಿವ ನಾಗೇಶ್

ಕೋಲಾರ: ಕೋಲಾರದ ಮುಳುಬಾಗಿಲಿನಲ್ಲಿ ಮಾತನಾಡಿದ ಅಬಕಾರಿ ಸಚಿವ ನಾಗೇಶ್, ಗುಂಡು, ಎಣ್ಣೆ ಯಾವುದೊ ಒಂದು ಖಾತೆ ಸಿಕ್ಕಿದೆ ಕೆಲಸ ಮಾಡುವೆ. ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಕೊಟ್ಟ ಕೆಲಸ ಮಾಡುವೆ ಎಂದು ಹೇಳಿದ್ದಾರೆ.

ಕೇಳಿದ ಖಾತೆಯನ್ನು ಯಾರಿಗೂ ಕೊಟ್ಟಿಲ್ಲ. ಶಾಸಕರು ಕೇಳಿದ ಖಾತೆಯನ್ನ ಯಾರಿಗೆ ಕೊಟ್ಟಿಲ್ಲ, ಎಲ್ಲರಿಗೂ ಬೇರೆಯದೇ ಸಿಕ್ಕಿದೆ. ಖಾತೆ ಅಸಮಾಧಾನ ಇರೋವ್ರು 2 ದಿನ ಕೋಪ ಮಾಡಿಕೊಂಡಿದ್ರು, ಆಮೇಲೆ ಸುಮ್ಮನಾದ್ರು. ಬಿಜೆಪಿ ಹೈ ಕಮಾಂಡ್ ಖಡಕ್ ಸೂಚನೆ ನಂತರ ಎಲ್ಲರೂ ಸುಮ್ಮನಾಗಿದ್ದಾರೆ. ನನಗೆ ಯಾರು ಏನೂ ಹೇಳಿಲ್ಲ, ನನಗೆ ಯಾರು ಎಚ್ಚರಿಕೆ ಕೊಟ್ಟಿಲ್ಲ. ನಾನು ಇಂಧನ ಖಾತೆ ಕೇಳಿದ್ದೆ ಆದ್ರೆ ಕೊಟ್ಟಿಲ್ಲ, ಇರೋ ಖಾತೆಯಲ್ಲೇ ಕೆಲಸ ಮಾಡುವೆ ಎಂದು ಹೇಳಿದ್ದಾರೆ.

Comments are closed.