ಕರ್ನಾಟಕ

ರಿಯಾಲಿಟಿ ಶೋನಲ್ಲಿ ಅವಕಾಶ ಸಿಗಲಿಲ್ಲವೆಂದು ಸೆಲ್ಫಿ ವೀಡಿಯೋ ಮಾಡಿ ಯುವಕ ಆತ್ಮಹತ್ಯೆ..!

Pinterest LinkedIn Tumblr


ಕೆ.ಆರ್.ಪುರಂ: ಸೆಲ್ಫಿ ವೀಡಿಯೋ ಮಾಡಿಟ್ಟು ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಕೆ.ಆರ್.ಪುರಂನಲ್ಲಿ ನಡೆದಿದೆ.

ಟಿಕ್‌ಟಾಕ್ ಮಾಡುವ ಮೂಲಕ ಲೋಕಲ್‌ನಲ್ಲಿ ಫೇಮಸ್ ಆಗಿದ್ದ ಯುವಕ ಕಿರಣ್(22) ರಿಯಾಲಿಟಿ ಶೋನಲ್ಲಿ ಚಾನ್ಸ್‌ ಸಿಗಲಿಲ್ಲವೆಂದು ಮನನೊಂದು, ಕಳೆದ ರಾತ್ರಿ ಹೊಸಕೋಟೆ ನಗರದ ಶ್ರೀನಿವಾಸ ಲಾಡ್ಜ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ರಿಯಾಲಿಟಿ ಸೋನಲ್ಲಿ ಸ್ಪರ್ಧಿಸಬೇಕು ಅಂತ ಹಣ ನೀಡಿ, ಮೋಸ ಹೋದ ಹಿನ್ನಲೆ ಕಿರಣ್ ಈ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದು, ನನ್ನ ಸಾವಿಗೆ ನಾನೇ ಕಾರಣ. ನನ್ನ ತಾಯಿಯನ್ನು ನಿಮ್ಮ ತಾಯಿಯಂತೆ ನೋಡಿಕೊಳ್ಳಿ ಎಂದು ಹೇಳಿ ಸೆಲ್ಪಿ ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸ್ಥಳಕ್ಕೆ ಹೊಸಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರು: ನಂದಿನಿ ಲೇಔಟ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಯುವತಿಯರಿಗೆ ಫೇಸ್ಬುಕ್ ಮತ್ತು ಸೀರಿಯಲ್ಗಳಲ್ಲಿ ಚಾನ್ಸ್ ಕೊಡಿಸ್ತಿನಿ ಅಂತ ಹೇಳಿ ವಂಚಿಸಿದ್ದ ನಿಖಿಲ್ ಗೌಡ ಎಂಬಾತನನ್ನು ಬಂಧಿಸಲಾಗಿದೆ.

ನಿಖಿಲ್ ಗೌಡ, ಖಾಸಗಿ ಜ್ಯೂವೆಲರಿ ಶಾಪ್ಗಳಲ್ಲಿ ಶೂಟ್ಗೆ ಆಯ್ಕೆ ಆಗಿದ್ದೀರಿ ಎಂದು ಹೇಳಿ ವಂಚನೆ ಮಾಡುತ್ತಿದ್ದು, ಆರೋಪಿಯ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದಾಗ ಇದೇ ಮಾದರಿಯಲ್ಲಿ ಹಲವು ಯುವತಿಯರಿಗೆ ವಂಚನೆ ಮಾಡಿದ್ದು, ಬೆಳಕಿಗೆ ಬಂದಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆ 9ಯುವತಿಯರಿಗೆ 4 ಲಕ್ಷ ಹಣ ಪಡೆದು ವಂಚಿಸಿದ್ದು, ಜೊತೆಗೆ ವ್ಯಕ್ತಿಯೊಬ್ಬರಿಗೆ ಬಿಡಿಎ ಸೈಟ್ ಕೊಡಿಸುವುದಾಗಿ 50 ಸಾವಿರ ಮೋಸಮಾಡಿದ್ದ ಎನ್ನಲಾಗಿದೆ.

Comments are closed.