ಕರ್ನಾಟಕ

ಕಲಬುರಗಿಯಲ್ಲಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ: ಐವರು ಸ್ಥಳದಲ್ಲೇ ಸಾವು, ಮೂವರಿಗೆ ಗಂಭೀರ ಗಾಯ

Pinterest LinkedIn Tumblr

ಕಲಬುರಗಿ: 2 ಮತ್ತು 3 ವರ್ಷದ ಮಕ್ಕಳು ಸೇರಿದಂತೆ ಐವರು ರಸ್ತೆ ಅಪಘಾತದಲ್ಲಿ ದಾರುಣ ಸಾವನ್ನಪ್ಪಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಕಲಬುರಗಿ ತಾಲೂಕಿನ ಸಾವಳಗಿ ಕ್ರಾಸ್ ಬಳಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಅಪಘಾತದಲ್ಲಿ ಕಾರು ನುಚ್ಚುನೂರಾಗಿದ್ದು ಅಪಘಾತದ ತೀವ್ರತೆಗೆ ಘಟನಾ ಸ್ಥಳದಲ್ಲೇ ಐವರು ಸಾವನ್ನಪ್ಪಿದ್ದಾರೆ. ಇನ್ನು ಮೂವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರನ್ನು ಸಂಜಯ್ ಕುಮಾರ್ ಚಡಚಣ(29), ರಾಣಿ ಸಂಜಯ್ ಚಡಚಣ(26), ಶ್ರೇಯಸ್ ಸಂಜಯ್ ಕುಮಾರ್ ಚಡಚಣ(3), ಭಾಗ್ಯಶ್ರೀ ಭೀಮಾಶಂಕರ್ ಅಲಗಿ(23) ಮತ್ತು ಧೀರಜ್ ಸಂಗಣ್ಣ(2) ಎಂದು ಗುರುತಿಸಲಾಗಿದೆ.

Comments are closed.