ಕರ್ನಾಟಕ

ಅಶ್ವತ್ಥನಾರಾಯಣಗೆ ಗೃಹ, ಅಶೋಕ್‌ಗೆ ಕಂದಾಯ, ಶೆಟ್ಟರ್‌ಗೆ ಕೈಗಾರಿಕೆ ! ಯಾರಿಗೆ ಯಾವ ಖಾತೆ? ಇಲ್ಲಿದೆ ಸಂಭಾವ್ಯ ಪಟ್ಟಿ…

Pinterest LinkedIn Tumblr

ಬೆಂಗಳೂರು: ಸಿಎಂ ಬಿಎಸ್‌ ಯಡಿಯೂರಪ್ಪ ಅವರ ಸಂಪುಟದ ನೂತನ ಸಚಿವರಿಗೆ ಪ್ರಮಾಣವಚನ ಸ್ವೀಕರಿಸಿದ ಒಂದು ವಾರದ ನಂತರ ಖಾತೆ ಹಂಚಿಕೆಯಾಗುತ್ತಿದೆ. ಅಂತಿಮವಾದ ಸಂಭಾವ್ಯ ಖಾತೆ ಹಂಚಿಕೆ ಪಟ್ಟಿಯನ್ನು ರಾಜ್ಯಪಾಲರಿಗೆ ರವಾನೆ ಮಾಡಲಾಗಿದೆ. ಪ್ರಸ್ತುತ ಸಿಕ್ಕಿರುವ ಮಾಹಿತಿಯನ್ವಯ ಯಾರಿಗೆ ಯಾವ ಖಾತೆ ಹಂಚಿಕೆಯಾಗುತ್ತದೆ ಎಂಬ ಪಟ್ಟಿ ಇಲ್ಲಿದೆ.

17 ಸಚಿವರಿಗೆ ಖಾತೆಗಳನ್ನು ಹಂಚಿಕೆಯಾಗುತ್ತಿದ್ದು ಗೃಹ ಖಾತೆ ಅಶ್ವತ್ಥನಾರಾಯಣ ಅವರಿಗೆ ಹಂಚಿಕೆಯಾಗಿದ್ದು, ನಿರೀಕ್ಷೆಯಂತೆ ಜೆಸಿ ಮಾಧುಸ್ವಾಮಿ ಅವರಿಗೆ ಸಂಸದೀಯ ವ್ಯವಹಾರಗಳ ಖಾತೆ ನೀಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ

ಅಶ್ವತ್ಥನಾರಾಯಣ ಗೌಡ ಅವರಿಗೆ ಪ್ರಭಾವಿ ಗೃಹ ಖಾತೆಯನ್ನು ಹಂಚಿಕೆ ಮಾಡುವ ಮೂಲಕ ಬಿಜೆಪಿಯಲ್ಲಿ ಆರ್‌. ಅಶೋಕ್‌ಗೆ ಪರ್ಯಾಯವಾಗಿ ಒಕ್ಕಲಿಗ ನಾಯಕನನ್ನು ಬೆಳೆಸುವ ಪ್ರಯತ್ನ ನಡೆಸಲಾಗುತ್ತಿದೆ ಎಂಬ ಸೂಚನೆ ಸಿಗುತ್ತಿದೆ.

ಖಾತೆ ಹಂಚಿಕೆ ಸಂಭಾವ್ಯ ಪಟ್ಟಿ
ಅಶ್ವತ್ಥನಾರಾಯಣ – ಗೃಹ ಇಲಾಖೆ
ಲಕ್ಷ್ಮಣ ಸವದಿ – ಸಹಕಾರ ಖಾತೆ
ಜೆಸಿ ಮಾಧುಸ್ವಾಮಿ – ಸಂಸದೀಯ ವ್ಯವಹಾರಗಳ ಖಾತೆ
ಕೆಎಸ್‌ ಈಶ್ವರಪ್ಪ – ಸಮಾಜ ಕಲ್ಯಾಣ ಇಲಾಖೆ
ಆರ್‌. ಅಶೋಕ್‌ – ಕಂದಾಯ ಇಲಾಖೆ
ಬಸವರಾಜ್‌ ಬೊಮ್ಮಾಯಿ – ಇಂಧನ ಇಲಾಖೆ
ಜಗದೀಶ್‌ ಶೆಟ್ಟರ್‌ – ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಖಾತೆ
ವಿ. ಸೋಮಣ್ಣ – ವಸತಿ ಖಾತೆ
ಶ್ರೀರಾಮುಲು – ಆರೋಗ್ಯ ಖಾತೆ
ಶಶಿಕಲಾ ಜೊಲ್ಲೆ – ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ
ಸಿಸಿ ಪಾಟೀಲ್‌ – ಗಣಿ ಮತ್ತು ಭೂವಿಜ್ಞಾನ
ಗೋವಿಂದ ಕಾರಜೋಳ – ಲೋಕೋಪಯೋಗಿ ಖಾತೆ
ಪ್ರಭು ಚೌಹಾಣ್‌ – ಯುವಜನ ಸಬಲೀಕರಣ ಮತ್ತು ಕ್ರೀಡೆ
ಸಿಟಿ ರವಿ – ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ

ಕೋಟ ಶ್ರೀನಿವಾಸ್ ಪೂಜಾರಿ-ಮೀನುಗಾರಿಕೆ, ಬಂದರು

ಚಂದ್ರಕಾಂತಗೌಡ ಚನ್ನಪ್ಪಗೌಡ ಪಾಟೀಲ್- ಗಣಿ ಮತ್ತು ಭೂ ವಿಜ್ಞಾನ

Comments are closed.