ಕರ್ನಾಟಕ

ಜೀವ ರಕ್ಷಣೆಗೆ ಮನೆ ಮೇಲ್ಛಾವಣಿ ಏರಿದ ದಂಪತಿ!

Pinterest LinkedIn Tumblr


ಸುರಿಯುತ್ತಿರುವ ಭಾರಿ ಮಳೆ ಅವರ ಬದುಕನ್ನು ಬೀದಿಗೆ ತಂದು ನಿಲ್ಲಿಸಿದೆ. ಜೀವ ಉಳಿಸಿಕೊಳ್ಳಲು ಮನೆಯ ಛಾವಣಿ ಮೇಲೆ ಕೂತಿರುವ ಈ ದಂಪತಿ ಮೂರು ದಿನದಿಂದ ಸಹಾಯಕ್ಕೆ ಅಂಗಲಾಚುತ್ತಿದ್ದು, ಇನ್ನು ಕೂಡ ರಕ್ಷಣಾ ಕಾರ್ಯ ದಂಪತಿಯನ್ನು ತಲುಪುವುದು ಸಾಧ್ಯವಾಗಿಲ್ಲ.

ಹೌದು ಬೆಳಗಾವಿ ತಾಲೂಕಿನ ಕಬಲಾಪುರ ಗ್ರಾಮದ ಕಾಳೇಶ ಜಂಗನ್ನವರ್​ ಹಾಗೂ ರತ್ನವ್ವಾ ಜಂಗನ್ನವರ ದಂಪತಿ ಹೀಗೆ ಮನೆ ಛಾವಣಿ ಮೇಲೆ ಜೀವ ಹಿಡಿದು ಕೂತು ಸಹಾಯದ ನೀರಿಕ್ಷೆಯಲ್ಲಿದ್ದು, ಮೂರು ದಿನಗಳಾದ್ರೂ ಇವರನ್ನು ರಕ್ಷಿಸಲು ಸಾಧ್ಯವಾಗಿಲ್ಲ.
ಮೂರು ದಿನಗಳಿಂದ ಸುರಿಯುತ್ತಿರು ಮಳೆ, ಚಳಿ,ರಾತ್ರಿಯನ್ನು ಲೆಕ್ಕಿಸದೇ ನೀರಿನಿಂದ ಜೀವ ಉಳಿಸಿಕೊಳ್ಳಲು ಮನೆ ಮೇಲೆಯೇ ಕುಳಿತು ರಕ್ಷಿಸುವಂತೆ ಮನವಿ ಮಾಡುತ್ತಿದ್ದಾರೆ.

ಎನ್​ಡಿಆರ್​ಎಫ್ ತಂಡ ಈ ದಂಪತಿಯನ್ನು ರಕ್ಷಿಸಲು ಕಾರ್ಯಾಚರಣೆ ನಡೆಸಿದ್ದು, 15 ಜನರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ಬೋಟ್​ ಮೂಲಕ ಇವರನ್ನು ರಕ್ಷಿಸುವ ಕಾರ್ಯ ಫಲಪ್ರದವಾಗಿಲ್ಲ. ಸ್ಥಳಕ್ಕೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಡಿಸಿಪಿ ಯಶೋಧಾ ವಂಟಗೂಡಿ ಬಂದಿದ್ದು, ಅವರ ನೇತೃತ್ವದಲ್ಲಿ ದಂಪತಿ ರಕ್ಷಣೆ ಕಾರ್ಯ ಮುಂದುವರೆದಿದೆ. ರಕ್ಷಣೆಗಾಗಿ ಹೆಲಿಕ್ಯಾಪ್ಟರ್​​ ಬಳಸುವ ಪ್ರಯತ್ನ ನಡೆದಿದೆಯಾದರೂ ಅದು ಫಲಕಾರಿಯಾಗಿಲ್ಲ. ಒಟ್ಟಿನಲ್ಲಿ ರಕ್ಷಣಾ ಕಾರ್ಯಕ್ಕಾಗಿ ಕಾಯುತ್ತಲೇ ದಂಪತಿ ಅಸ್ವಸ್ಥರಾಗುತ್ತಿದ್ದು,ಮೂರು ದಿನಗಳಿಂದ ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ.

Comments are closed.