ಕರ್ನಾಟಕ

ಪ್ರವಾಹ ಸಂತ್ರಸ್ತರ ನೆರವಿಗೆ ತಕ್ಷಣ ಧಾವಿಸುವಂತೆ ಕಾಂಗ್ರೆಸ್​ ಕಾರ್ಯಕರ್ತರಿಗೆ ಸೂಚನೆ ನೀಡಿದ ಸಿದ್ದರಾಮಯ್ಯ

Pinterest LinkedIn Tumblr

ಬೆಂಗಳೂರು: ಮಳೆ ಪ್ರವಾಹಕ್ಕೆ ಉತ್ತರ ಕರ್ನಾಟಕದ ಜನರು ನಲುಗಿದ್ದಾರೆ. ಮನೆ, ಮಠ ಕಳೆದುಕೊಂದ ಸಂತ್ರಸ್ತರು ರಕ್ಷಣೆಗೆ ಎದುರು ನೋಡುತ್ತಿದ್ದಾರೆ. ಅವರ ನೆರವಿಗೆ ಧಾವಿಸುವುದು ನಮ್ಮ ಕರ್ತವ್ಯವಾಗಿದ್ದು, ತಕ್ಷಣಕ್ಕೆ ನೆರೆ ಸಂತ್ರಸ್ತರ ಕಷ್ಟಕ್ಕೆ ಮುಂದಾಗಿ ಎಂದು ಕಾಂಗ್ರೆಸ್​ ಕಾರ್ಯಕರ್ತರು, ಮುಖಂಡರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ಕಂಡರಿಯದ ಮಳೆ ಪ್ರವಾಹಕ್ಕೆ ಉತ್ತರ ಕರ್ನಾಟಕ ತುತ್ತಾಗಿದ್ದು, ಸಿದ್ದರಾಮಯ್ಯ ಕ್ಷೇತ್ರವಾದ ಬಾಲಕೋಟೆ ಜಿಲ್ಲೆಯಲ್ಲಿ ನೆರೆಗೆ 106ಗ್ರಾಮಗಳು ಮುಳುಗಿದೆ. ಬೆಳಗಾವಿ, ರಾಯಚೂರಿನಲ್ಲಿಯೂ ಕೃಷ್ಣೆ, ಮಲಪ್ರಭಾ, ಘಟಪ್ರಭಾ ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು, ಜನ-ಜಾನುವಾರುಗಳು ಪ್ರವಾಹದಿಂದ ಸಂಕಷ್ಟ ಸ್ಥಿತಿ ತಲುಪಿದ್ದಾರೆ.

ಈಗಾಗಲೇ ಪ್ರವಾಹದಿಂದ ಎಲ್ಲವನ್ನು ಕಳೆದುಕೊಂಡಿರುವ ಜನರು ಗಂಜಿಕೇಂದ್ರ ತಲುಪಿದ್ದು, ಅವರ ರಕ್ಷಣೆಗೆ ಅಗತ್ಯಕ್ರಮ ಕೈಗೊಳ್ಳಬೇಕಿದೆ. ನದಿ ಪಾತ್ರದ ನದಿಗಳು ನಡುಗಡ್ಡೆಗಳಾಗಿದ್ದು, ಅವರ ರಕ್ಷಣೆಗೆ ಎನ್​ಡಿಆರ್​ಎಫ್​, ಎಸ್​ಡಿಆರ್​ಎಫ್​, ಪೊಲೀಸ್​, ಅಗ್ನಿಶಾಮಕ ದಳ ಇನ್ನಿಲ್ಲದ ಹೋರಾಟ ನಡೆಸಿದೆ. ಅವರ ಜೊತೆ ನಾವು ಕೂಡ ಕೈ ಜೋಡಿಸಬೇಕಾದ ಅವಶ್ಯಕತೆ ಇದೆ. ಈ ಹಿನ್ನೆಲೆ ನೆರೆ ಸಂತ್ರಸ್ತ ಪ್ರದೇಶಗಳಿಗೆ ಭೇಟಿ ನೀಡಿ ಅವರ ಸಮಸ್ಯೆ ಆಲಿಸಬೇಕಿದೆ ಎಂದು ಟ್ವೀಟ್​ ಮಾಡಿದ್ದಾರೆ.

ಇದೇ ವೇಳೆ ಉತ್ತರ ಕರ್ನಾಟಕದಲ್ಲಿ ಪ್ರವಾಹಕ್ಕೆ ಕಾರಣ ಮಹಾರಾಷ್ಟ್ರದ ಕೋಯ್ನಾ ಜಲಾಶಯದಿಂದ ಏಕಾಏಕಿ ಅಪಾರ ಪ್ರಮಾಣ ನೀರು ಬಿಟ್ಟಿರುವುದು. ಮಹಾರಾಷ್ಟ್ರದಲ್ಲಿ ಇನ್ನು ಮಳೆಯಾಗುತ್ತಿದ್ದು, ಮತ್ತೆ ನೀರಿನ ಹರಿವು ಹೆಚ್ಚುವ ಸಾಧ್ಯತೆ ಇದೆ. ಈ ಹಿನ್ನೆಲೆ ಜಲಾಶಯದಿಂದ ನೀರು ಬಿಡುವುದನ್ನು ನಿಯಂತ್ರಿಸುವಂತೆ ಸಿಎಂ ಬಿಎಸ್​ ಯಡಿಯೂರಪ್ಪ ಮಹಾರಾಷ್ಟ್ರ ಮುಖ್ಯಮಂತ್ರಿಗಳೊಂದಿಗೆ ಮಾತನಾಡುವಂತೆ ಸಲಹೆ ನೀಡಿದ್ದಾರೆ.

Comments are closed.