
ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ಅತೀವೃಷ್ಠಿಯಿಂದ ಅಸ್ತವ್ಯಸ್ಥ ಆದರೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ದೆಹಲಿಯಲ್ಲಿ ಠಿಕಾಣಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಡಿ.ಕೆ ಶಿವಕುಮಾರ್ ಅವರು, ಅದೇ ಯಡಿಯೂರಪ್ಪನವರ ಸ್ಟೈಲ್, ನಾವೆಲ್ಲ ದೆಹಲಿ, ಹೈಕಮಾಂಡ್ ಅಂತ ಹೇಳ್ತಿದ್ದೆವು ಈಗ ಅವರೂ ಅದನ್ನೇ ಮಾಡ್ತಿದ್ದಾರೆ ಎಂದು ಅವರು ಬುಧವಾರ ತಿಳಿಸಿದರು.
ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಯಡಿಯೂರಪ್ಪನವರಿಗೆ ಏನು ಕಷ್ಟ ಇದೆಯೋ, ಅವರು ಬಹಳ ಆತುರದಲ್ಲಿದ್ದಾರೆ. ಅವರ ಆತುರವನ್ನ ಜನ ಗಮನಿಸುತ್ತಿದ್ದಾರೆ. 10 ದಿನ ಕಳೆದರೂ ಒನ್ ಮ್ಯಾನ್ ಶೋ ಆಗಿದೆ ಸರ್ಕಾರ. ಪಾಪ ಅವರಂತೆ ಆತುರದಲ್ಲಿ ನಾನು ಏನನ್ನೂ ಹೇಳಲ್ಲ, ಎಲ್ಲವನ್ನೂ ರಾಜ್ಯದ ಜನರೇ ಗಮನಿಸುತ್ತಾರೆ ಎಂದು ಡಿ.ಕೆ ಶಿವಕುಮಾರ್ ಅವರು ನುಡಿದರು.
ಗೋಕಾಕ್ ಕಾಂಗ್ರೆಸ್ ಮುಖಂಡರ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಹೊಸೂರು ಸೇರಿ ಹಲವು ಕಡೆಯವರು ಬರ್ತಾರೆ, ತಮ್ಮತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ. ಅವರ ಸಮಸ್ಯೆಗಳನ್ನ ಪರಿಹರಿಸುವ ಪ್ರಯತ್ನ ಮಾಡುತ್ತೇನೆ. ಗೋಕಾಕ್ ಟಿಕೆಟ್ ಯಾರಿಗೆ ಅಂತ ನಾನೇಗೆ ಹೇಳೋದು ನಮ್ಮ ನಾಯಕರು ತೀರ್ಮಾನ ಮಾಡ್ತಾರೆ, ಸಿದ್ದರಾಮಯ್ಯ, ದಿನೇಶ ಗುಂಡೂರಾವ್ ನೋಡಿಕೊಳ್ತಾರೆ, ಇಂಡುವಿಶ್ಯುಲ್ ಆಗಿ ನಾನು ಏನೂ ಮಾತನಾಡಲ್ಲ ಎಂದರು.
Comments are closed.