ಕರ್ನಾಟಕ

ಕಳೆದ ವಾರ ವರ್ಗಾವಣೆಯಾಗಿದ್ದ ರವಿಕಾಂತೇಗೌಡ ಈ ವಾರ ಸಂಚಾರ ವಿಭಾಗಕ್ಕೆ ವರ್ಗಾವಣೆ

Pinterest LinkedIn Tumblr

ಬೆಂಗಳೂರು: ತಮ್ಮ ಸರ್ಕಾರ ಬಂದ ಮೇಲೆ ಯಾವುದೇ ಕಾರಣಕ್ಕೂ ಸೇಡಿನ ರಾಜಕಾರಣ ಮಾಡುವುದಿಲ್ಲ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದರು. ಆದರೆ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಮೇಲೆ ಮತ್ತೆ ವರ್ಗಾವಣೆ ಪರ್ವ ಮುಂದುವರಿಸಿದ್ದಾರೆ.

ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಮುಂದಾಗಿರುವ ಯಡಿಯೂರಪ್ಪ ಹಲವು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.

ಕಳೆದ ವಾರ ವರ್ಗಾವಣೆಯಾಗಿದ್ದ ಹಿರಿಯ ಪೊಲೀಸ್ ಅಧಿಕಾರಿ ರವಿಕಾಂತೇಗೌಡ ಅವರನ್ನು ಸಂಚಾರ ವಿಭಾಗಕ್ಕೆ ಜಂಟಿ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ.

ಕಳೆದ ವಾರ ರವಿಕಾಂತೇಗೌಡ ಅವರನ್ನು ಯಾವ ಹುದ್ದೆಯೂ ನೀಡದೇ ವರ್ಗಾವಣೆ ಮಾಡಲಾಗಿತ್ತು, ಈ ವಾರ ಮತ್ತೆ ವರ್ಗಾವಣೆಯಾಗಿರುವ ಅವರಿಗೆ ಸಂಚಾರ ವಿಭಾಗದ ಜಂಟಿ ಆಯುಕ್ತರನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ.

Comments are closed.