ಕರ್ನಾಟಕ

ಒಂದು ವಾರದೊಳಗೆ ಯಡಿಯೂರಪ್ಪ ಸಂಪುಟದಲ್ಲಿನ ಇವರೆಲ್ಲಾ ಸಚಿವರಿವರಾಗಲಿದ್ದಾರೆ….!

Pinterest LinkedIn Tumblr

ಬೆಂಗಳೂರು: ಮೈತ್ರಿ ಸರ್ಕಾರ ಪತನಗೊಂಡ ಬಳಿಕ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬಿಎಸ್ ಯಡಿಯೂರಪ್ಪ ಅವರು ಮೊದಲ ಬಾರಿಗೆ ಹೊರರಾಜ್ಯದ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

ತೆಲಂಗಾಣ ಬಳಿಯ ಭದ್ರಾಚಲಂನಲ್ಲಿರುವ ಸೀತಾರಾಮಚಂದ್ರನ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದಿದ್ದಾರೆ. ಸಿಎಂ ಆದ ಮೇಲೆ ಮೊದಲ ಬಾರಿಗೆ ಹೊರ ರಾಜ್ಯದ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

ಇನ್ನೂ ಒಂದು ವಾರದಲ್ಲಿ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆಯಿದೆ. ಇನ್ನೂ ದಿನದಿಂದ ದಿನಕ್ಕೆ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದೆ, ಆದರೆ ಸಂಪುಟಕ್ಕೆ ಯಾರು ಸೇರಬೇಕು, ಯಾರು ಬೇಡ ಎಂಬುದನ್ನು ಅಮಿತ್ ಶಾ ನಿರ್ಧರಿಸಲಿದ್ದಾರೆ, ಸಿಎಂ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯ ಉಸ್ತುವಾರಿ ಮುರುಳಿಧರ ರಾವ್ ಸಂಪುಟ ಸದಸ್ಯರನ್ನು ಆಯ್ಕೆ ಮಾಡಲಿದ್ದಾರೆ.

ಆಗಸ್ಟ್ 5 ಅಥವಾ 6 ರಂದು ಅಮಿತ್ ಶಾ ಅವರನ್ನು ಭೇಟಿ ಮಾಡಲಿರುವ ಯಡಿಯೂರಪ್ಪ ಸಂಪುಟ ರಚನೆಗೆ ಅನುಮೋದನೆ ಪಡೆಯಲಿದ್ದಾರೆ, ಆಗಸ್ಟ್ 9 ರಂದು ಸಂಪುಟ ವಿಸ್ತರಣೆಯಾಗಲಿದೆ ಎಂದು ಹೇಳಲಾಗಿದೆ. ಆದರೆ ಯಾರ್ಯಾರಿಗೆ ಮಂತ್ರಿಗಿರಿ ಸಿಗಲಿದೆ ಎಂಬುದು ಇನ್ನೂ ಖಚಿತವಾಗಿಲ್ಲ.

ಯಡಿಯೂರಪ್ಪ ಸಂಪುಟದಲ್ಲಿನ ಸಂಭಾವ್ಯ ಸಚಿವರಿವರು
ಜಗದೀಶ್ ಶೆಟ್ಟರ್, ಶ್ರೀರಾಮುಲು, ಕರುಣಾಕರ ರೆಡ್ಡಿ, ಸುನೀಲ್ ಕುಮಾರ್, ಆರವಿಂದ್ ಲಿಂಬಾವಳಿ, ಮಾಧು ಸ್ವಾಮಿ, ಡಾ. ಅಶ್ವತ್ಥ ನಾರಾಯಣ, ಎಂಎಲ್ ಸಿ ತೇಜಸ್ವಿನಿ ಗೌಡ, ಆರ್. ಅಶೋಕ, ಕೆಎಸ್ ಈಶ್ವರಪ್ಪ, ರವಿ ಸುಬ್ರಮಣ್ಯ, ಉಮಾನಾಥ್ ಕೋಟ್ಯಾನ್, ಬಸವರಾಜ್ ಬೊಮ್ಮಾಯಿ,ಸುರೇಶ್ ಕುಮಾರ್, ಗೋವಿಂದ್ ಕಾರಜೋಳ, ಎಸ್ ಎ ರಾಮದಾಸ್, ಕೆಜಿ ಬೋಪಯ್ಯ, ಸಿಎಸ್ ನಿರಂಜನ್ ಕುಮಾರ್, ವಿ,ಸೋಮಣ್ಣ, ಶಶಿಕಲಾ ಜೊಲ್ಲೆ, ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ, ಮುರುಗೇಶ್ ನಿರಾಣಿ, ಬಸನಗೌಡ ಪಾಟೀಲ್ ಯತ್ನಾಳ್, ಸುಭಾಷ್ ಗುತ್ತೇದಾರ್, ಕಳಕಪ್ಪ ಬಂಡಿ, ಸಿಎಂ ಉದಾಸಿ, ರೇಣುಕಾಚಾರ್ಯ, ಕುಮಾರ್ ಬಂಗಾರಪ್ಪ, ಸಿಟಿ ರವಿ ಮತ್ತು ಎಂಎಲ್ ಸಿ ರವಿಕುಮಾರ್ ಸಚಿವರಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Comments are closed.