ಕರ್ನಾಟಕ

ಯಡಿಯೂರಪ್ಪಗೆ ಸಂಪುಟ ವಿಸ್ತರಣೆಗೆ ಬ್ಲ್ಯಾಕ್​ಮೇಲ್​ ಮಾಡ್ತಿದ್ದಾರಾ ಬಿಜೆಪಿ ಶಾಸಕರು?!

Pinterest LinkedIn Tumblr


ಅಧಿಕಾರಕ್ಕೆರುವ ಮಹದಾಸೆಯಿಂದ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿ ಸಿಎಂ ಆಗಿ ಪಟ್ಟಕ್ಕೇರಿದ ಬಿಎಸ್​ವೈ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೌದು ಅತ್ತ ಹೈಕಮಾಂಡ್​​ ಇತ್ತ ಬಿಜೆಪಿ ಶಾಸಕರು ಇಬ್ಬರ ನಡುವೆ ಸಿಎಂ ಬಿಎಸ್​ವೈ ಸಿಲುಕಿಕೊಂಡು ಒದ್ದಾಡುತ್ತಿದ್ದು ಸಂಪುಟ ವಿಸ್ತರಣೆ ಮಾಡಬೇಕು ಇಲ್ಲ ಸರ್ಕಾರ ಕಳೆದುಕೊಳ್ಳಬೇಕು ಎಂಬ ಸ್ಥಿತಿ ನಿರ್ಮಾಣವಾಗಿದೆ.

ಹೌದು ರಾಜ್ಯದಲ್ಲಿ ಕಳೆದವಾರವೇ ಅಸ್ತಿತ್ವಕ್ಕೆ ಬಂದ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುತ್ತಲೇ ಇದೆ. ಇದಕ್ಕೆ ಕಾರಣ ಬಿಜೆಪಿ ಹೈಕಮಾಂಡ್ ಮತ್ತು ಬಿಜೆಪಿಯ ಹಿರಿಯ ಶಾಸಕರ ನಡೆ. ಅತ್ತ ಹೈಕಮಾಂಡ್​ ಬಿಎಸ್​ವೈಗೆ ಯಾವುದೇ ಸಪೋರ್ಟ್​ ನೀಡದೇ ಅಧಿಕಾರ ನಡೆಸಲು ಸೂಚಿಸಿದ್ದರೇ, ಇತ್ತ ಬಿಜೆಪಿ ಶಾಸಕರು ಆದಷ್ಟು ಬೇಗ ಸಚಿವ ಸಂಪುರ ವಿಸ್ತರಣೆ ಮಾಡಿ ಎಂಬ ಒತ್ತಡ ಹೇರುತ್ತಿದ್ದಾರೆ.

ತಕ್ಷಣವೇ ಸಚಿವ ಸಂಪುಟ ವಿಸ್ತರಣೆ ಮಾಡಿ ನಮಗೆ ಸಚಿವ ಸ್ಥಾನ ಕೊಡಿ. ಇಲ್ಲದಿದ್ದರೇ ನಾವು ರಾಜೀನಾಮೆಗೂ ಸಿದ್ಧ ಎಂದು ಬೆದರಿಕೆ ಒಡ್ಡುತ್ತಿದ್ದು, 15 ದಿನಗಳಾದ್ರು ಸರ್ಕಾರದ ಆಡಳಿತ ಟೇಕಾಪ್ ಆಗಿಲ್ಲ. ಕೇವಲ ಅಧಿಕಾರಿಗಳ ಸಭೆ ನಡೆಸುತ್ತ ಸಿಎಂ ಟೈಂ ಪಾಸ್ ಮಾಡುತ್ತಿದ್ದಾರೆ ಎಂದು ಬಿಜೆಪಿಗರೇ ಅಸಮಧಾನ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಬಳ್ಳಾರಿ, ಚಿತ್ರದುರ್ಗ ಹಾಗೂ ಬೆಂಗಳೂರು ಶಾಸಕರು ಹೆಚ್ಚಿನ ಒತ್ತಡ ಹೇರುತ್ತಿದ್ದಾರೆ.

ಅನರ್ಹ ಶಾಸಕರ ಪ್ರಕರಣವನ್ನು ಮತ್ತೆ ನೋಡಿಕೊಳ್ಳೋಣ. ಅವರ ಪ್ರಕರಣ ಸುಪ್ರೀಂ ಕೋರ್ಟ್​​ ನಲ್ಲಿ ವಿಚಾರಣೆ ಹಂತದಲ್ಲಿದೆ. ಅದು ಮುಗಿದ ಮೇಲೆ ಅವರಿಗೆ ಸ್ಥಾನ ಕೊಡಿ. ಸಧ್ಯಕ್ಕೆ ನಮಗೆ ಸ್ಥಾನ ಕೊಡಿ ಎಂದು ಶಾಸಕರು ಬಿಎಸ್ವೈಗೆ ಒತ್ತಾಯಿಸುತ್ತಿದ್ದಾರೆ.
ಹೀಗಾಗಿ ಅಧಿಕಾರಕ್ಕೆ ಬಂದ 10 ದಿನದಲ್ಲಿ ಸಿಎಂ ಬಿಎಸ್​ವೈಗೆ ಅಧಿಕಾರ ನಡೆಸೋದೇ ಕಷ್ಟ ಎಂಬ ಸ್ಥಿತಿ ಲಭ್ಯವಾಗಿದೆ. ಇನ್ನೊಂದೆಡೆ ಎಲ್ಲ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಜೊತೆಗೆ ನಿಂತಿರುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಸಹ ಬಿಎಸ್​ವೈ ಅಧಿಕಾರಕ್ಕೆ ಬಂದಾಗಿನಿಂದ ಮೌನವಾಗಿದ್ದು, ಯಾವುದೇ ಸಪೋರ್ಟ್ ನೀಡುತ್ತಿಲ್ಲ ಎನ್ನಲಾಗಿದ್ದು ಇದರಿಂದ ಬಿಎಸ್​ವೈ ಕಂಗಾಲಾಗಿದ್ದಾರೆ.

ಅಗಸ್ಟ 5 ರ ಬಳಿಕ ಬಿಎಸ್​ವೈ ದೆಹಲಿಗೆ ತೆರಳಿದ್ದು, ಸಚಿವ ಸಂಪುಟ ಪಟ್ಟಿಯೊಂದಿಗೆ ದೆಹಲಿಗೆ ತೆರಳಿ ಹೈಕಮಾಂಡ್​ ಅನುಮತಿ ಪಡೆದು ಹಿಂತಿರುಗಿದ ಬಳಿಕ ಸಂಪುಟ ವಿಸ್ತರಣೆ ನಡೆಯಲಿದ್ದು, ಇದಕ್ಕೆ ಬಿಜೆಪಿ ಶಾಸಕರು ಯಾವ ರೀತಿ ಸ್ಪಂದಿಸುತ್ತಾರೆ ಕಾದು ನೋಡಬೇಕಿದೆ.

Comments are closed.