ಕರ್ನಾಟಕ

ಸಂಪುಟ ರಚನೆಗೆ ಯಡಿಯೂರಪ್ಪಗೆ ಶರತ್ತು ಹಾಕಿ ಆಘಾತ ನೀಡಿದ ಅಮಿತ್‌ ಷಾ..!

Pinterest LinkedIn Tumblr


ಒಂದೆಡೆ ಅನರ್ಹಗೊಂಡ ಶಾಸಕರು ತಮ್ಮ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಮೀನಾಮೇಷ ಎಣಿಸುತ್ತಿದ್ದರೆ, ಇನ್ನೊಂದೆಡೆ ಬಿಎಸ್‌ವೈಗೆ ಸಂಪುಟ ರಚನೆ ಮಾಡಲು ಕೂಡ ಸ್ವಾತಂತ್ರ್ಯವಿಲ್ಲದಂತಾಗಿದೆ.

ಸದ್ಯಕ್ಕಿಲ್ಲ ಬಿ.ಎಸ್.ವೈ ಸಂಪುಟ ರಚನೆ
ಆಗಸ್ಟ್ 5 ಮತ್ತು 6ರಂದು ಸಿಎಂ ಯಡಿಯೂರಪ್ಪ ದೆಹಲಿಗೆ ತೆರಳಲಿದ್ದು, ಹೈಕಮಾಂಡ್ ಜೊತೆ ಸಂಪುಟ ರಚನೆ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಸಚಿವಾಕಾಂಕ್ಷಿಗಳ ಲೀಸ್ಟ್ ಜೊತೆ ತೆರಳಲಿರುವ ಬಿಎಸ್‌ವೈ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ ಬಳಿಕ ಅಂದರೆ ಆಗಸ್ಟ್ 8ರ ನಂತರ ಸಂಪುಟ ರಚನೆ ಮಾಡಲಿದ್ದಾರೆ.

ಸಂಪುಟ ರಚನೆ ವಿಚಾರದಲ್ಲಿ ಸ್ವತಃ ಸಿಎಂ ಬಿ.ಎಸ್.ವೈಗಿಲ್ಲ ಫುಲ್ ಫ್ರೀಡಂ!
ಇನ್ನು ಸಂಪುಟ ರಚನೆ ವಿಚಾರದಲ್ಲಿ ಸಿಎಂ ಯಡಿಯೂರಪ್ಪರಿಗೂ ಕೇವಲ ಐದು ಆಪ್ಶನ್ಸ್ ಇದೆ. ತಮಗೆ ಬೇಕಾದ 5 ಶಾಸಕರಿಗೆ ಮಾತ್ರ ಯಡಿಯೂರಪ್ಪ ಸಚಿವ ಸ್ಥಾನ ನೀಡಬಹುದು. ಉಳಿದವರನ್ನ ಹೈಕಮಾಂಡ್ ಸೆಲೆಕ್ಟ್ ಮಾಡಲಿದೆ. ಅಲ್ಲದೇ, ಕರ್ನಾಟಕ ಸರ್ಕಾರದ ಮೇಲೆ ಸೆಂಟ್ರಲ್ ಹೋಮ್‌ ಮಿನಿಸ್ಟರ್ ಅಮಿತ್‌ ಷಾ ನಿಗಾ ಇಟ್ಟಿದ್ದು, ಮೂವರು ಸಿಬ್ಬಂದಿಗಳು, ಹಾಗೂ ಇಬ್ಬರು ಐ.ಎ.ಎಸ್ ಅಧಿಕಾರಿಗಳು ಬಿಎಸ್‌ವೈ ಸರ್ಕಾರದಲ್ಲೇ ಕಾರ್ಯನಿರ್ವಹಿಸಲಿದ್ದಾರೆ.

ಅವರು ಗುಪ್ತವಾಗಿ ಅಮಿತ್ ಶಾಗೆ ವರದಿ ನೀಡಲಿದ್ದಾರೆ ಎನ್ನಲಾಗಿದೆ. ಸಿಎಂ ಬಿ.ಎಸ್.ವೈ ಆಡಳಿತಾತ್ಮಕ ನಿರ್ಣಯಗಳು, ನಿಲುವುಗಳ ಬಗ್ಗೆ ಈ ಅಧಿಕಾರಿಗಳು, ಸಿಬ್ಬಂದಿಗಳು ಅಮಿತ್‌ಶಾಗೆ ವರದಿ ನೀಡಲಿದ್ದಾರೆ.

ಇನ್ನೊಂದೆಡೆ ಅನರ್ಹಗೊಂಡಿರುವ ಅತೃಪ್ತ ಶಾಸಕರು ತಾವು ಸುಪ್ರೀಂಕೋರ್ಟ್ ಮೇಟ್ಟಿಲೇರೋದಾಗಿ ಹೇಳಿದ್ದರು. ಆದ್ರೆ ಈವರೆಗೂ ಹೇಳಿದ ನಿರ್ಧಾರ ತೆಗೆದುಕೊಳ್ಳದೇ, ಸ್ಪಷ್ಟ ನಿರ್ಧಾರಕ್ಕೆ ಬರದೇ ಗೊಂದಲದಲ್ಲಿದ್ದಾರೆ.

ಸ್ಪೀಕರ್ ಆದೇಶದ ವಿರುದ್ಧ ನಾವು ದೂರು ಸಲ್ಲಿಸಬೇಕೇ? ಸ್ಪೀಕರ್ ಆದೇಶದ ಮರು ಪರಿಶೀಲನೆ ಬಗ್ಗೆ ದೂರು ನೀಡಬೇಕೇ? ನ್ಯಾಯಾಂಗ ನಿಂದನೆ ಅಡಿಯಲ್ಲಿ ಕೇಸ್ ದಾಖಲಿಸಬೇಕೇ? ಎಂಬ ಮೂರು ರೀತಿಯ ಗೊಂದಲದಲ್ಲಿರುವ ಶಾಸಕರು, ತಮ್ಮ ವಕೀಲ ಮುಕುಲ್ ರೋಹ್ಟಗಿ ಸಲಹೆ ತೆಗೆದುಕೊಂಡು ದೂರು ನೀಡಲು ನಿರ್ಧರಿಸಿದ್ದಾರೆ.

Comments are closed.