ಕರ್ನಾಟಕ

ಚಿಕ್ಕಮಗಳೂರಿನವರಾಗಿರುವ ಸಿದ್ಧಾರ್ಥ್‌ 20 ಸಾವಿರ ಎಕರೆ ಕಾಫಿ ತೋಟ- ಕೆಫೆ ಕಾಫಿ ಡೇ ಮಾಲೀಕ

Pinterest LinkedIn Tumblr

ಬೆಂಗಳೂರು: ಸೋಮವಾರ ರಾತ್ರಿ ಇದ್ದಕ್ಕಿಂದ್ದಂತೆ ನಾಪತ್ತೆಯಾಗಿರುವ ಮಾಜಿ ಮುಖ್ಯಮಂತ್ರಿ ಎಸ್‌ ಎಂ ಕೃಷ್ಣ ಅವರ ಅಳಿಯ ಸಿದ್ಧಾರ್ಥ್​ ಅವರಿಗಾಗಿ ಶೋಧ ಕಾರ್ಯ ಕೈಗೊಳ್ಳಲಾಗಿದ್ದು, ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯವರಾಗಿದ್ದಾರೆ.

ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಮರಗೋಡು ಸಮೀಪ 20 ಸಾವಿರ ಎಕರೆ ಕಾಫಿತೋಟವನ್ನು ಹೊಂದಿದ್ದು, ಎಬಿಸಿ ಕಾಫಿ ಕ್ಯೂರಿಂಗ್​​​​​, ಅಂಬರವೇಲಿ ವಸತಿ ಶಾಲೆ ಹಾಗೂ ಸಾರೈ ಹೋಟೆಲ್​​​​​​ನ್ನು ನಡೆಸುತ್ತಿದ್ದರು.

ಕೆಫೆ ಕಾಫಿ ಡೇ ಸಂಸ್ಥಾಪಕರಾಗಿರುವ ಅವರು ಬೆಂಗಳೂರು ಸೇರಿದಂತೆ ದೇಶದ ಅನೇಕ ಕಡೆ ಕಾಫಿ ಡೇ ಹೊಂದಿದ್ದಾರೆ. ಮೂರು ವರ್ಷಗಳ ಹಿಂದೆ ಸಿದ್ಧಾರ್ಥ್​ ತಂದೆ ಗಂಗಹೆಗ್ಡೆ ಹಾಗೂ ಮಾವ ಎಸ್​.ಎಂ. ಕೃಷ್ಣ ಹೆಸರಿನಲ್ಲಿ ಬಡರೋಗಿಗಳಿಗೆ ಉಚಿತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಶಂಕು ಸ್ಥಾಪನೆ ಮಾಡಿದ್ದರು.

ಅವರು ನಾಪತ್ತೆಯಾದ ಹಿನ್ನೆಲೆಯಲ್ಲಿ ಕಾಫಿ ತೋಟ ಕಾರ್ಮಿಕರು, ಕಾಫಿ ಕ್ಯೂರಿಂಗ್ ಸೇರಿದಂತೆ ಶಾಲಾ ಕಾಲೇಜು ವಿಧ್ಯಾರ್ಥಿಗಳಲ್ಲಿ ನೀರವ ಮೌನ ಆವರಿಸಿದೆ.

Comments are closed.