ಕರ್ನಾಟಕ

ಬಿಜೆಪಿಗೆ ಜೆಡಿಎಸ್​ ಬಾಹ್ಯ ಬೆಂಬಲ ಕುರಿತು ಯಡಿಯೂರಪ್ಪ ಹೇಳಿದ್ದಿಷ್ಟು?

Pinterest LinkedIn Tumblr


ಬೆಂಗಳೂರು: ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಜೆಡಿಎಸ್ ಬಾಹ್ಯ ಬೆಂಬಲ ಕುರಿತು ಚರ್ಚೆ ಮಾಡಲಾಗಿದೆ. ಜೆಡಿಎಸ್ ಬಾಹ್ಯ ಬೆಂಬಲ ಕೊಡಲು ಸಿದ್ಧವಿರುವುದಾಗಿ ಕೆಲ ಶಾಸಕರು ಮಾಹಿತಿ ಕೊಟ್ಟಿರುವ ಪ್ರಸ್ತಾಪ ಹಿನ್ನೆಲೆಯಲ್ಲಿ ಚರ್ಚೆ ನಡೆದಿದೆ.

ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರು ವಿಷಯಾಧಾರಿತ ಬೆಂಬಲ ಕೊಡುವುದಾಗಿ ಹೇಳಿರುವ ಕುರಿತು ಮಾತನಾಡಲಾಗಿದೆ. ಈ ಬಗ್ಗೆ ಸಿಎಂ ಬಿಎಸ್​ ಯಡಿಯೂರಪ್ಪನವರು ಈ ವಿಷಯ ಹೈಕಮಾಂಡ್​ಗೆ ಬಿಡೋಣ ಎಂದಿದ್ದಾರೆ ಎನ್ನಲಾಗಿದೆ.

ನಗರದಲ್ಲಿಂದು ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಈ ವಿಷಯ ಬಗ್ಗೆ ಮಾತನಾಡಿರುವ ಸಿಎಂ ಬಿಎಸ್​ವೈ​ ಅವರು, ಅಧಿಕೃತವಾಗಿ ಜೆಡಿಎಸ್ ತನ್ನ ನಿಲುವು ಹೇಳಲಿ. ಬಿಜೆಪಿಗೆ ಮತ್ತೊಮ್ಮೆ ಜೆಡಿಎಸ್ ಬೆಂಬಲದ ಅಗತ್ಯವಿಲ್ಲ, ಒಂದೊಮ್ಮೆ ಜೆಡಿಎಸ್ ಅಧಿಕೃತವಾಗಿ ಆಫರ್ ಕೊಟ್ರೆ ಹೈಕಮಾಂಡ್ ಗಮನಕ್ಕೆ ತರೋಣ ಎಂದು ಅವರು ಸಭೆಯಲ್ಲಿ ಸೇರಿದ ಶಾಸಕರಿಗೆ ತಿಳಿಸಿದ್ದಾರೆ.

ಇನ್ನು ಈ ಬಗ್ಗೆ ಹೊರಗೆಲ್ಲೂ ಯಾರೂ ಮಾತಾಡೋದು ಬೇಡ, ಜನತೆಗೆ ತಪ್ಪು ಸಂದೇಶ ಹೋಗೋದು ಬೇಡ. ಬಿಜೆಪಿ ಸ್ವಂತ ಬಲದಿಂದಲೇ ಸರ್ಕಾರ ರಚಿಸುತ್ತಿದೆ, ಸ್ಪೀಕರ್ ನಿರ್ಧಾರ ಅಸಾಂವಿಧಾನಿಕ, ಮುಂದೆ ಅತೃಪ್ತರ ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಪು ಆಶಾದಾಯಕವಾಗೂ ಬರಬಹುದು ಆಗ ಅತೃಪ್ತರನ್ನು ಉಪಚುನಾವಣೆಯಲ್ಲಿ ಗೆಲ್ಲಿಸಿಕೊಂಡ್ರೆ ಉಳಿದ ಅವಧಿಗೆ ಬಿಜೆಪಿ ಗಟ್ಟಿಯಾಗಲಿದೆ ಎಂದು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪನವರು ಸಭೆಯಲ್ಲಿ ಸ್ಪಷ್ಟವಾಗಿ ಸೂಚನೆ ನೀಡಿದ್ದಾರೆ.

Comments are closed.