ಕರ್ನಾಟಕ

ಆಗಸ್ಟ್ ತಿಂಗಳಿನಲ್ಲಿ ಸರ್ಕಾರಿ ನೌಕರರಿಗೆ ಸಂಬಳ, ವಿಧವಾ ವೇತನ, ಪಿಂಚಣಿ ಇಲ್ಲ!: ಇದಕ್ಕೆಲ್ಲ ಕಾರಣ ಅತೃಪ್ತ ಶಾಸಕರ ಪಿತೂರಿ

Pinterest LinkedIn Tumblr


ರಾಜ್ಯ ರಾಜಕೀಯದ ಅಸ್ಥಿರತೆ ಸರ್ಕಾರಿ ನೌಕರರಿಗೂ ಶಾಕ್​ ನೀಡಿದೆ. ಆಗಸ್ಟ್​​ ತಿಂಗಳಲ್ಲಿ ಸರ್ಕಾರ ನೌಕರರಿಗೆ ಸಂಬಳಕ್ಕೆ ಬ್ರೇಕ್​ ಬೀಳಲಿದೆ. ಜುಲೈ 31ರೊಳಗೆ ಹಣಕಾಸು ಮಸೂದೆಗೆ ವಿಧಾನಸಭೆ ಅಂಗೀಕಾರ ನೀಡಬೇಕು. ಇಲ್ಲವಾದರೆ ಆಗಸ್ಟ್​​ನಿಂದ ಯಾವುದೇ ಯೋಜನೆಗಳಿಗೆ ಅಥವಾ ಸರ್ಕಾರಿ ನೌಕರರ ಸಂಬಳಕ್ಕೆ ಬೊಕ್ಕಸದಿಂದ ಒಂದು ರೂಪಾಯಿ ರಿಲೀಸ್​ ಆಗಲ್ಲ. ಇದಕ್ಕೆಲ್ಲ ಕಾರಣ ಅತೃಪ್ತ ಶಾಸಕರ ಪಿತೂರಿ.

ರಾಜ್ಯ ಸರ್ಕಾರ ವಿವಿಧ ಇಲಾಖೆಗಳಿಗೆ ನಿಗದಿಪಡಿಸಿದ ಮೊತ್ತ, ಖರ್ಚು-ವೆಚ್ಚ ಹಾಗೂ ನೌಕರರಿಗೆ ಸಂಬಳ ನೀಡಲು ಒಪ್ಪಿಗೆ ನೀಡುವ ಧನವಿನಿಯೋಗ ವಿಧೇಯಕಕ್ಕೆ ಇದೇ 31ರ ಒಳಗೆ ಒಪ್ಪಿಗೆ ನೀಡಿದ್ರೆ ಮಾತ್ರ ಆಗಸ್ಟ್​​​ನಿಂದ ಸರ್ಕಾರದ ಯೋಜನೆಗಳಿಗೆ ಹಣ ಬಿಡುಗಡೆ ಮಾಡಲು ಸಾಧ್ಯ. ಆದರೆ ಈಗಾಗಲೇ ಸಮ್ಮಿಶ್ರ ಸರ್ಕಾರ ಉರುಳಿದ್ದು, ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದಿಲ್ಲ.

ಸಧ್ಯ 31ರೊಳಗೆ ವಿಧಾನಮಂಡಲದ ಉಭಯ ಸದನಗಳು ಧನವಿನಿಯೋಗ ವಿಧೇಯಕಕ್ಕೆ ಒಪ್ಪಿಗೆ ನೀಡದಿದ್ದರೆ ಆಗಸ್ಟ್‌ ತಿಂಗಳಲ್ಲಿ ಸರ್ಕಾರದ ಯಾವುದೇ ಹಣಕಾಸಿನ ಚಟುವಟಿಕೆಗಳು ನಡೆಯದಂತಹ ಸ್ಥಿತಿ ನಿರ್ಮಾಣವಾಗುವ ಆತಂಕ ಎದುರಾಗಿದೆ.

ಇದೀಗಾ ಕುಮಾರಸ್ವಾಮಿ ಸರ್ಕಾರ ಪತನಗೊಂಡಿದೆ. ಹೊಸ ಸರ್ಕಾರ ರಚನೆ ಆಗಿ ಅಧಿವೇಶನ ಕರೆದು ಮಸೂದೆಗೆ ಕೂಡಲೆ ಒಪ್ಪಿಗೆ ನೀಡಬೇಕು. ಒಪ್ಪಿಗೆ ನೀಡದಿದ್ದಲ್ಲಿ ಸರ್ಕಾರಿ ನೌಕರರಿಗೆ ಸಂಬಳವಿಲ್ಲ. ವಿಧವೆಯರಿಗೆ ವಿಧವಾ ವೇತನ ವಿಲ್ಲ.ಪಿಂಚಣಿಯೂ ಇಲ್ಲ ಒಟ್ನಲ್ಲಿ ಅತೃಪ್ತ ಶಾಸಕರ ಆಟಕ್ಕೆ ಸರ್ಕಾರ ಉರುಳಿದ್ದರ ಪರಿಣಾಮ ಜನ ಸಾಮಾನ್ಯರು ಬಡವರು ಪರದಾಡುವಂತಾಗಿದ್ದು, ಅತೃಪ್ತ ಶಾಸಕರಿಗೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

Comments are closed.