ಕರ್ನಾಟಕ

ನಮ್ಮ ಸಿದ್ದರಾಮಯ್ಯ ನಾಯಕ: ಶಿವರಾಂ ಹೆಬ್ಬಾರ್ ಶಾಕಿಂಗ್ ಹೇಳಿಕೆ.?!

Pinterest LinkedIn Tumblr


ಯಲ್ಲಾಪುರ: ಮುಂಬೈನ ಹೊಟೇಲ್‌ನಲ್ಲಿ ತಂಗಿದ್ದ ಶಾಸಕ ಶಿವರಾಂ ಹೆಬ್ಬಾರ್ ದಿಢೀರ್ ಅಂತ ಯಲ್ಲಾಪುರಕ್ಕೆ ಬಂದಿಳಿದಿದ್ದು, ಮಾಧ್ಯಮದ ಜೊತೆ ಮಾತನಾಡಿದ್ದಾರೆ.

ಈ ವೇಳೆ ರಾಜೀನಾಮೆ ವಿಚಾರವಾಗಿ ಮಾತನಾಡಿದ ಹೆಬ್ಬಾರ್, ನಮ್ಮನ್ನ ಅತೃಪ್ತರು ಎನ್ನಬೇಡಿ. ನಾವು ಅತೃಪ್ತ ಶಾಸಕರಲ್ಲ, ಅಸಹಾಯಕರು. ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಸ್ಪೀಕರ್ ರಾಜೀನಾಮೆ ಅಂಗೀಕಾರ ಮಾಡುವ ವಿಶ್ವಾಸವಿದೆ ಎಂದಿದ್ದಾರೆ.

ಆದ್ರೆ ಇದೇ ವೇಳೆ ಮಾತನಾಡಿದ ಹೆಬ್ಬಾರ್, ನಮಗೆ ಸಿದ್ದರಾಮಯ್ಯನವರೇ ನಾಯಕರು ಎಂದಿದ್ದಾರೆ. ಕಾಂಗ್ರೆಸ್ ಬಿಡುವ ತನಕ ಕಾಂಗ್ರೆಸ್ಸಿಗರೇ ನಮ್ಮ ನಾಯಕರು. ಸಾಕಷ್ಟು ಮುಂದೆ ಸಾಗಿದ್ದೇವೆ. ಮುಂದೆ ಸಾಗಿದ ಮೇಲೆ ಸಿದ್ದರಾಮಯ್ಯ ಕರೆದಿದ್ದರು. ಮೊದಲೇ ಕರೆದಿದ್ದರೆ ಯೋಚಿಸಬಹುದಿತ್ತು. ಈಗ ಯಾವ ಪ್ರಯೋಜನವಿಲ್ಲ ಎಂದಿದ್ದಾರೆ.

ವಿಧಾನಸಭೆಯಲ್ಲಿ ಸಿದ್ದರಾಮಯ್ಯರ ಮಾತು ಗಮನಿಸಿದ್ದೇವೆ. ದೇವರು ಅವರಿಗೆ ಒಳ್ಳೆಯದನ್ನು ಮಾಡಲಿ. ರಾಜೀನಾಮೆ ನೀಡಿರುವ ಎಲ್ಲ ಶಾಸಕರು ಅನುಭವಿಗಳು. ನಮ್ಮ ನಿರ್ಧಾರದಿಂದ ಜನರಿಗೆ ತೊಂದರೆಯಾಗಿರಬಹುದು. ಕ್ಷೇತ್ರದ ಜನರ ಕ್ಷಮೆಯಾಚಿಸುತ್ತೇವೆ ಎಂದು ಯಲ್ಲಾಪುರದಲ್ಲಿ ಶಾಸಕ ಅರೆಬೈಲು ಶಿವರಾಂ ಹೆಬ್ಬಾರ್ ಹೇಳಿಕೆ ನೀಡಿದ್ದಾರೆ.

Comments are closed.