
ಕೊಪ್ಪಳ: ನಗರದ ಖಾಸಗಿ ಆಸ್ಪತ್ರೆಯ ಎಡವಟ್ಟಿನಿಂದಾಗಿ ಜೀವಂತವಾಗಿರುವ ಮಹಿಳೆ ಸಾವನ್ನಪ್ಪಿದ್ದಾಳೆಂದು ತಿಳಿದು ಶವ ಸಂಸ್ಕಾರ ನೆರವೇರಿಸಲು ಕುಟುಂಬಸ್ಥರು ಆಗಮಿಸಿದ ಘಟನೆ ನಡೆದಿದೆ.
ಕವಿತಾ ಮಂಜುನಾಥ ಕುಂಬಾರ್ (25) ಮಹಿಳೆಗೆ ನಗರದ ಗೋವನಕೊಪ್ಪ ಖಾಸಗಿ ಆಸ್ಪತ್ರೆಯಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆ ಗಾಗಿ ದಾಖಲಿಸಲಾಗಿತ್ತು. ಈಕೆಗೆ ಆರು ಮಕ್ಕಳಿದ್ದು, ನಂತರ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಮುಂದಾಗಿದ್ದರು.
ಪತಿ ಹಾಗೂ ತವರು ಮನೆಯವರು ತಮ್ಮ ಸಂಬಂಧಿಕರಿಗೆ ದೂರವಾಣಿ ಮೂಲಕ ಕವಿತಾ ಸಾವನ್ನಪ್ಪಿರುವ ಬಗ್ಗೆ ತಿಳಿಸಿದ್ದಾರೆ. ರಾತ್ರಿ ಮನೆಗೆ ಮಹಿಳೆಯ ಶವ ಒಯ್ಯುವುದು ಬೇಡ ಎಂದು ಆಸ್ಪತ್ರೆಯಲ್ಲಿ ಬಿಟ್ಟಿದ್ದರು.
ಮಂಗಳವಾರ ಬೆಳಗ್ಗೆ ತಮ್ಮ ಸಂಬಂಧಿಕರ ವೈದ್ಯರೊಂದಿಗೆ ಆಗಮಿಸಿ ಶವ ಒಯ್ಯುವ ವೇಳೆ ಎಲ್ಲರಿಗೂ ಆಶ್ಚರ್ಯ ಕಾದಿತ್ತು. ಮಹಿಳೆ ಉಸಿರಾಟ ಕಂಡು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶವ ಸಂಸ್ಕಾರಕ್ಕೆ ಆಗಮಿಸಿದವರೆಲ್ಲರೂ ಆಸ್ಪತ್ರೆಯ ಎದುರು ಆಗಮಿಸಿ ಪ್ರತಿಭಟಿಸಿದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸುತ್ತಿದ್ದಾರೆ.
ಆದರೆ ವೈದ್ಯರು, ವೆಂಟಿಲೇಟರ್ ಮೇಲೆ ಮಹಿಳೆಯ ಜೀವ ನಿಂತಿದೆ. ವೆಂಟಿಲೇಟರ್ ತೆಗೆದರೆ ಮಹಿಳೆ ಸಾವನ್ನಪ್ಪಲಿದ್ದು, ಈ ಕುರಿತು ಸಂಬಂಧಕರಿಗೆ ತಿಳಿಸಿದೆ. ಆದರೆ ಇದನ್ನೇ ತಪ್ಪಾಗಿ ಕುಟುಂಬಸ್ಥರು ಸಾವನ್ನಪ್ಪಿದ್ದಾಳೆ ಎಂದು ತಿಳಿದುಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿವೆ.
Comments are closed.