
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪುಂಡರ ಅಟ್ಟಹಾಸ ದಿನೇ ದಿನೇ ಹೆಚ್ಚುತ್ತ ಇದ್ದು .ನಡುರಸ್ತೆಯಲ್ಲೇ ಲಾಂಗ್ನಲ್ಲಿ ಕೇಕ್ ಕತ್ತರಿಸಿ ಕಿಡಿಗೇಡಿಗಳು ಪುಂಡಾಟ ನಡೆಸಿರೋ ಘಟನೆ ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ನಡೆದಿದೆ.ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.
ಪುಡಿ ರೌಡಿ ಅದಿಲ್ ಎಂಬಾತ ತನ್ನ ಬರ್ತ್ಡೇ ವೇಳೆ ಪೊಲೀಸರಿಗೆ ಕೇರ್ ಮಾಡದೇ ಲಾಂಗ್ನಲ್ಲಿ ಕೇಕ್ ಕಟ್ ಮಾಡಿ ಫುಲ್ ಪಾರ್ಟಿ ಮಾಡಿದ್ದಾರೆ. ಇನ್ನು ಈ ಘಟನೆ ಕುರಿತು ನೈಟ್ ಬೀಟ್ ಪೊಲೀಸರು ಸಹ ಹೆಚ್ಚು ಗಮನಹರಿಸಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗುತ್ತಿದೆ.
Comments are closed.