ಕರ್ನಾಟಕ

ವಿಶ್ವಾಸ ಮತಯಾಚನೆ ಮುಂದೂಡಿದ್ದಕ್ಕೆ ಸಿಡಿದೆದ್ದ ಬಿಜೆಪಿ: ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ!

Pinterest LinkedIn Tumblr

ಬೆಂಗಳೂರು: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ವಿಶ್ವಾಸ ಮತಯಾಚನೆ ನಾಳೆಗೆ ಮುಂದೂಡಿದ ಹಿನ್ನೆಲೆಯಲ್ಲಿ ಬಿಜೆಪಿ ಮೈತ್ರಿ ಸರ್ಕಾರದ ವಿರುದ್ಧ ಸಿಡಿದೆದ್ದು ವಿಧಾನಸೌಧದಲ್ಲೇ ಅಹೋರಾತ್ರಿ ಧರಣಿ ನಡೆಸುತ್ತಿದೆ.

ಮೈತ್ರಿ ಸರ್ಕಾರದ ವಿರುದ್ಧ ಅಹೋ ರಾತ್ರಿ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ವಿಧಾನಸಭೆ ಮೊಗಸಾಲೆಯಲ್ಲಿ ಶಾಸಕರೊಂದಿಗೆ ಸಮಾಲೋಚನೆ ನಡೆಸಿದರು. ನಂತರ ಭೋಜನ ಸವಿದ ಶಾಸಕರು ಮಲಗಿ ನಿದ್ರಿಸಿದ್ದಾರೆ.

ಆಡಳಿತ ಪಕ್ಷದವರು ಕಾಲಾಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಆಹೋರಾತ್ರಿ ಧರಣಿಗೆ ಮುಂದಾಗಿತ್ತು. ಈ ಮಧ್ಯೆ ರಾಜ್ಯಪಾಲರು ಶುಕ್ರವಾರ ವಿಶ್ವಾಸ ಮತ ಸಾಬೀತು ಪಡಿಸುವಂತೆ ಸಿಎಂ ಕುಮಾರಸ್ವಾಮಿ ಅವರಿಗೆ ಆದೇಶ ನೀಡಿದ್ದು ಬಹುಮತ ಸಾಬೀತು ಪಡಿಸಬಹುದೇ ಅಥವಾ ವಿಶ್ವಾಸ ಮತ ಸಾಬೀತು ಮಡಲಾಗದೇ ವಿದಾಯ ಭಾಷಣ ಮಾಡಿ ನಿರ್ಗಮಿಸುವರೋ ಎಂಬುದೀಗ ತೀವ್ರ ಕುತೂಹಲ ಮೂಡಿಸಿದೆ.

Comments are closed.