ಕರ್ನಾಟಕ

ರಾಜೀನಾಮೆ ಕೊಡುವ ಶಾಸಕರನ್ನು ಬಹಿಷ್ಕರಿಸಿ: ಎಸ್.ಆರ್. ಹಿರೇಮಠ

Pinterest LinkedIn Tumblr


ಧಾರವಾಡ: ಪಕ್ಷಾಂತರ ಮಾಡುವ ಶಾಸಕರನ್ನು ರಾಜಕೀಯವಾಗಿ ಮಾತ್ರವಲ್ಲದೇ ಸಾಮಾಜಿಕವಾಗಿಯೂ ಬಹಿಷ್ಕಾರ ಹಾಕುವ ಕೆಲಸವನ್ನು ಜನರು ಮಾಡಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖಂಡ ಎಸ್.ಆರ್. ಹಿರೇಮಠ ಹೇಳಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತಮ್ಮ ಸ್ವಾರ್ಥಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ. ರಾಜೀನಾಮೆ ನೀಡಿರುವ ಶಾಸಕರು ಅಧಿಕಾರ ಮತ್ತು ಹಣದ ಆಮಿಷಗಳಿಗೆ ಬಲಿಯಾಗಿ ರಾಜೀನಾಮೆ ನೀಡಿದ್ದಾರೆ ಎಂದರು.

ಇನ್ನು ಆಯಾ ರಾಮ-ಗಯಾ ರಾಮ ಸಂಸ್ಕೃತಿಯಲ್ಲಿ ತೊಡಗಿರುವ ಜನಪ್ರತಿನಿಧಿಗಳನ್ನು ತಿರಸ್ಕರಿಸುವ ಕೆಲಸವನ್ನು ಜನರು ಮಾಡಬೇಕು. ರಾಜ್ಯದಲ್ಲಿ ಇಂತಹ ರಾಜಕೀಯ ಸನ್ನಿವೇಶ ಸೃಷ್ಠಿಯಾಗಲು ಈ ಶಾಸಕರ ನಿಲುವುಗಳೇ ಕಾರಣವಾಗಿದೆ ಎಂದು ಅವರು ತಿಳಿಸಿದರು.

ಸದ್ಯ ಸಂವಿಧಾನಾತ್ಮಕ ಬಿಕ್ಕಟ್ಟು ಉದ್ಭವಿಸಿದ ಹಿನ್ನೆಲೆಯಲ್ಲಿ ಸರ್ವೋಚ್ಛ ನ್ಯಾಯಾಲಯ ತನ್ನ ಕರ್ತವ್ಯ ನಿಭಾಯಿಸಿದೆ. ಶಾಸಕರ ಹಕ್ಕು, ಸ್ಪೀಕರ ಅಧಿಕಾರ ಇನ್ನಿತರ ಅಂಶಗಳನ್ನು ಅತ್ಯಂತ ಸೂಕ್ಷ್ಮವಾಗಿ ಪರೀಶಿಲಿಸಿದ್ದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಅವರು ಹೇಳಿದ್ದಾರೆ.

ಇತ್ತ ಪಕ್ಷಾಂತರ ನಿಷೇಧ ಕಾನೂನಿನ ಎಲ್ಲ ಆಶಯಗಳನ್ನು ಗಾಳಿಗೆ ತೂರಿರುವ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ನಡೆಯನ್ನು ಜನತೆಯತ್ತ ಗಮನಹರಿಸಬೇಕಿದೆ ಎಂದ ಅವರು, ಒಂದು ಪಕ್ಷ ಅಧಿಕಾರ ಉಳಿಸಿಕೊಳ್ಳಲು ಹವಣಿಸುತ್ತಿದ್ದರೆ, ಇನ್ನೊಂದು ಪಕ್ಷ ಅಧಿಕಾರ ಹಿಡಿಯಲು ಅತಿ ಕೀಳುಮಟ್ಟದ ಕುತಂತ್ರ ನಡೆಸುತ್ತಿರುವ ಸಂದರ್ಭದಲ್ಲಿ ಸಮಾಜದ ಪಾತ್ರ ಮಹತ್ವದ್ದಾಗಿದೆ ಎಂದು ಎಸ್​. ಆರ್ ಹಿರೇಮಠ ನುಡಿದರು.

Comments are closed.