ಕರ್ನಾಟಕ

ಕೊನೆ ಕ್ಷಣದಲ್ಲಿ ರದ್ದಾಗಿದ್ದ ಚಂದ್ರಯಾನ-2 ಉಡಾವಣೆ ಜುಲೈ 22ಕ್ಕೆ: ಇಸ್ರೊ ಪ್ರಕಟ

Pinterest LinkedIn Tumblr

ಬೆಂಗಳೂರು: ರಾಕೆಟ್ ನಲ್ಲಿ ತಾಂತ್ರಿಕ ದೋಷದಿಂದ ಕೊನೆ ಕ್ಷಣದಲ್ಲಿ ರದ್ದಾಗಿದ್ದ ಭಾರತೀಯ ಬಾಹ್ಯಾಕಾಶ ಲೋಕದ ಬಹು ನಿರೀಕ್ಷಿತ ಚಂದ್ರಯಾನ-2 ಉಡಾವಣೆ ಮುಂದಿನ ಸೋಮವಾರ ಅಪರಾಹ್ನ 2.43 ಗಂಟೆಗೆ ನಿಗದಿಯಾಗಿದೆ.

ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಕಳೆದ ಜುಲೈ 15ರಂದು ಭಾರತೀಯ ಕಾಲಮಾನ ನಸುಕಿನ ಜಾವ 2.51 ಗಂಟೆಗೆ ಚಂದ್ರಯಾನ-2 ಉಡಾವಣೆಯಾಗಬೇಕಿತ್ತು. ಆದರೆ ರಾಕೆಟ್ ನಲ್ಲಿ ಉಡಾವಣೆಗೆ ನಿಗದಿಪಡಿಸಿದ ಕಾಲಮಾನಕ್ಕಿಂತ ಒಂದು ಗಂಟೆ ಮುನ್ನ ತಾಂತ್ರಿಕ ದೋಷ ಕಂಡು ಬಂದು ಉಡಾವಣೆ ರದ್ದುಪಡಿಸಲಾಗಿತ್ತು.

ನಂತರ ಈ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡಿದವು. ಅಂತರಿಕ್ಷ ವಿಜ್ಞಾನಿಗಳಿಗೆ ಭಾರೀ ನಿರಾಸೆಯುಂಟಾಗಿತ್ತು.

ಇದಕ್ಕೆಲ್ಲಾ ತೆರೆ ಎಳೆದಿರುವ ಇಸ್ರೊ ಇಂದು ಟ್ವೀಟ್ ಮಾಡಿ ಜುಲೈ 22ರಂದು ಭಾರತೀಯ ಕಾಲಮಾನ ಅಪರಾಹ್ನ 2.43 ಗಂಟೆಗೆ ಉಡಾವಣೆಯಾಗಲಿದೆ ಎಂದು ತಿಳಿಸಿದೆ.

Comments are closed.