ಕರ್ನಾಟಕ

ಜಮಖಂಡಿಯಲ್ಲಿ ವಸತಿ ನಿಲಯದ ನಾಲ್ಕಂತಸ್ತಿನ ಕಟ್ಟಡದಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ

Pinterest LinkedIn Tumblr

ಬಾಗಲಕೋಟೆ: ವಸತಿ ನಿಲಯದ ನಾಲ್ಕಂತಸ್ತಿನ ಕಟ್ಟಡದಿಂದ ಹಾರಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಮಖಂಡಿ ನಗರದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.

ಮಂಗಳವಾರ ರಾತ್ರಿ ನಡೆದ ಘಟನೆಯಲ್ಲಿ ಪ್ರಿಯಾಂಕಾ ಮೇತ್ರಿ(17) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆ ಜಮಖಂಡಿಯ ರಾಯಲ್ ಪ್ಯಾಲೆಸ್ ಕಾಲೇಜಿನಲ್ಲಿ ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿದ್ದಳು.

ಮಂಗಳವಾರ ರಾತ್ರಿ ತನ್ನೆಲ್ಲಾ ಸ್ನೇಹಿತರು ಮಲಗಿದ ತರುವಾಯ ರಾಯಲ್ ಪ್ಯಾಲೇಸ್ ಕಾಲೇಜ್ ಹಾಸ್ಟೆಲ್ ನ ಕಟ್ಟಡದಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ರಬಕವಿ-ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದವಳಾಗಿದ್ದ ಪ್ರಿಯಾಂಕಾ ಸಾವಿಗೆ ನಿಖರ ಕಾರಣ ತಿಳಿದಿಲ್ಲ. ವಿಷಯ ತಿಳಿದ ಪೋಷಕರು ಸ್ಥಳಕ್ಕೆ ಧಾವಿಸಿದ್ದು ಮಗಳ ಸಾವಿನ ಕಾರಣ ತಿಳಿಯುವವರೆಗೆ ಮೃತದೇಹದ ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡಲ್ಲ ಎಂದು ಪ್ರತಿಭಟನೆ ನಡೆಸಿದ್ದಾರೆ.

ಘಟನೆ ಕುರಿತಂತೆ ಜಮಖಂಡಿ ನಗರಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Comments are closed.