ವೈದ್ಯರಾಗುವುದ ಎಷ್ಟೋ ಮಕ್ಕಳ ಕನಸ್ಸಾಗಿರುತ್ತೆ. ವೈದ್ಯನಾಗುವುದೆಂದರೆ ನೀರು ಕುಡಿದಷ್ಟು ಸುಲಭವಲ್ಲ ಅದು ಒಂದು ಬಗೆಯ ತಪಸ್ಸಿದ್ದಂಗೆ ವೈದ್ಯಕೀಯ ಕೋರ್ಸ್ ಸೇರಲು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ಎನ್‌ಇಇಟಿ) ಉತ್ತೀರ್ಣರಾಗುವುದು ಕಡ್ಡಾಯ. ಇದರಲ್ಲಿ ಅತಿ ಹೆಚ್ಚು ಅಂಕ ಪಡೆದರಷ್ಟೇ ಅವರು ಬಯಸಿದ ಕಾಲೇಜು ಸೇರಲು ಸಾಧ್ಯ. ನಂತರ ನಿರ್ಧಿಷ್ಟ ವರ್ಷಗಳು ವ್ಯಾಸಂಗ ಮಾಡಿ ಅದರಲ್ಲಿ ಉತ್ತೀರ್ಣರಾದರೆ ಮಾತ್ರ ವೈಧ್ಯನಾಗಲು ಸಾಧ್ಯ.
ಆದರೆ ಡಾ. ತಿಮ್ಮಪ್ಪ ಶೆಟ್ಟಿಗಾರ್ ಎನ್ನುವ ವ್ಯಕ್ತಿ ಎಸ್‌ಎಸ್‌ಎಲ್‌ಸಿ ಅನುತ್ತೀರ್ಣ ಆದವರಿಗೂ ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿಯಿಂದಲೇ ವೈದ್ಯರೆಂದು ನಕಲಿ ಪ್ರಮಾಣಪತ್ರ ನೀಡಿರುವ ಪ್ರಕರಣ ಇದೀಗಾ ಬೆಳಕಿಗೆ ಬಂದಿದ್ದು ಉಪ್ಪಾರ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಡಾ.ತಿಮ್ಮಪ್ಪ ಶೆಟ್ಟಿಗಾರ್ ಎನ್ನುವವ ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿಯಲ್ಲಿ 2012ರಿಂದ ನಾಲ್ಕು ವರ್ಷಗಳ ಕಾಲ ರಿಜಿಸ್ಟ್ರಾರ್ ಆಗಿದ್ದರು ಈ ವ್ಯಕ್ತಿ ಎಸ್‌ಎಸ್‌ಎಲ್‌ಸಿ ಅನುತ್ತೀರ್ಣ ಆದವರ ಬಳಿ ಲಕ್ಷಾಂತರ ರೂ. ಲಂಚ ಪಡೆದು ವೈದ್ಯ ವೃತ್ತಿಗೆ ಅರ್ಹರಲ್ಲದ ವ್ಯಕ್ತಿಗಳಿಗೆ ವೈದ್ಯಕೀಯ ನೊಂದಣಿ ಪ್ರಮಾಣ ಪತ್ರಗಳನ್ನು ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಈ ವಿಚಾರ ಬೆಳಕಿಗೆ ಬಂದ ಕೂಡಲೇ ಹೆಚ್ಚೆತ್ತು ಕೊಂಡಿರುವ ಕರ್ನಾಟಕ ಆರ್ಯುವೇದ ಮತ್ತು ಯುನಾನಿ ವೈದ್ಯ ಮಂಡಳಿ ಈ ಹಿಂದೆ ರಿಜಿಸ್ಟ್ರಾರ್ ಆಗಿದ್ದ ಡಾ.ತಿಮ್ಮಪ್ಪ ಶೆಟ್ಟಿಗಾರ್ ಎಂಬುವರ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಫ್‌ಐಆರ್ ದಾಖಲಿಸಿದ್ದಾರೆ.
ಈ ಪ್ರಕರಣ ಕುರಿತು ಹಾಲಿ ರಿಜಿಸ್ಟ್ರಾರ್ ಡಾ.ವೆಂಕಟರಾಮಯ್ಯ ಅವರು ಕೆಲವರ ದಾಖಲೆ ಪರಿಶೀಲಿಸಿದ್ದರು. ಈ ವೇಳೆ ಕಾಮಾಕ್ಷಿಪಾಳ್ಯ ನಿವಾಸಿ ಕೆ.ಮೊಹಮ್ಮದ್ ಖಾಜಾ ಮೊಹಿದೀನ್ ಎಂಬಾತನ ಬಳಿ ನಕಲಿ ದಾಖಲೆ ಇರುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ವಿಚಾರಣೆ ನಡೆಸಿದಾಗ ಎಸ್‌ಎಸ್‌ಎಲ್‌ಸಿ ಅನುತ್ತೀರ್ಣನಾಗಿರುವ ಮೊಹಮ್ಮದ್ ಬಳಿ ತಿಮ್ಮಪ್ಪ ಶೆಟ್ಟಿಗಾರ್ 10 ಲಕ್ಷ ರು. ಪಡೆದು ವೈದ್ಯ ವೃತ್ತಿ ನಿರತ ವೈದ್ಯ ಪ್ರಮಾಣಪತ್ರ (ಬ್ಯಾಚುಲರ್ ಆಫ್ ಯುನಾನಿ ಮೆಡಿಸಿನ್ ಅಂಡ್ ಸರ್ಜರಿ) ಪದವೀಧರ ಪ್ರಮಾಣ ಪತ್ರ ನೀಡಿರುವ ವಿಷಯ ಬೆಳಕಿಗೆ ಬಂದಿದೆ ಎಂಬುದು ಬೆಳಕಿಗೆ ಬಂದಿದೆ.
ಇದೇ ರೀತಿ ಡಾ.ತಿಮ್ಮಪ್ಪ ತನ್ನ ಅಧಿಕಾರವಧಿಯಲ್ಲಿ ಸಾಕಷ್ಟು ವಿದ್ಯಾರ್ಥಿಗಳ ಬಳಿ ಲಕ್ಷಾಂತರ ಲಂಚ ಪಡೆದು ವೃತ್ತಿಗೆ ಮೋಸ ಎಸಗಿರುವುದಾಗಿ ಇದೀಗಾ ಅನೇಕರು ದೂರ ದಾಖಲಿಸಿದ್ದು ತಿಮ್ಮಪ್ಪ ಶೆಟ್ಟಿಹಾಗೂ ಹಿಂದಿನ ನೊಂದಾಣಾಧಿಕಾರಿಗಳು ತಮ್ಮ ಅಧಿಕಾರವದಿಯ ವೇಳೆ ನೀಡಲಾದ ವೈದ್ಯಕೀಯ ಪ್ರಮಾಣ ಪತ್ರ ನೀಡಿರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸದ್ದಾರೆ .
ಇವರಿಗೆ ಲಕ್ಷ ರೂಪಾಯಿ ಲಂಚ ನೀಡಿದರೆ ವೈದ್ಯರಾಗಬಹುದು!

Comments are closed.