
ನೀವು ಪ್ಯೂರ್ ವೆಜಿಟೇರಿಯನಾ..ಹಾಗಾದ್ರೆ ಇನ್ನು ಮುಂದೆ ಪಿಜ್ಜಾ ಬರ್ಗರ್ ತಿನ್ನುವ ಮುನ್ನ ಸ್ವಲ್ಪ ಎಚ್ಚರವಾಗಿರಿ. ಹೌದು ಬೆಂಗಳೂರಿನ ಸಬ್ ವೇ ರೆಸ್ಟೋರೆಂಟ್ ಒಂದರಲ್ಲಿ ವೆಜಿಟೆಬಲ್ ಪನ್ನಿರ್ ಟಿಕ್ಕಾದಲ್ಲಿ ಹುಳ ಪತ್ತೆಯಾಗಿದೆ.
ಇನ್ ಫೆಂಟ್ರಿ ರಸ್ತೆಯಲ್ಲಿರೋ ಸಭ್ ವೇ ರೆಸ್ಟೋರೆಂಟ್ಗೆ ಫ್ಯಾಮಿಲಿ ಜೊತೆ ಹೋಗಿದ್ದ ಗುರುಚರಣ್ ವೆಜ್ ಟಿಕ್ಕಾವನ್ನು ಆರ್ಡರ್ ಮಾಡಿದ್ರು. ಅದರಲ್ಲಿ ಹುಳು ಪತ್ತೆಯಾಗಿದ್ದು. ಕೂಡಲೇ ಗುರುಚರಣ್ ಮ್ಯಾನೇಜರ್ಗೆ ದೂರು ನೀಡಿದ್ದಾರೆ.
ಆದರೆ ದೂರು ಸ್ವೀಕರಿಸಿ ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳುವ ಬದಲು ಹೊಟೇಲ್ ಮ್ಯಾನೇಜರ್ ಗ್ರಾಹಕ ಗುರುಚರಣ್ಗೆ ಅವಾಜ್ ಹಾಕಿದ್ದಾರೆ ಎನ್ನಲಾಗಿದೆ. ಹೀಗಾಗಿ ಗುರುಚರಣ್ ಸಾಮಾಜಿಕ ಜಾಲತಾಣಗಳ ಮೂಲಕ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.
Comments are closed.