ಕರ್ನಾಟಕ

ಮನ್ಸೂರ್‌ ಖಾನ್ ದಿಢೀರ್ ಪ್ರತ್ಯಕ್ಷ..!

Pinterest LinkedIn Tumblr


IMA ಬಹುಕೋಟಿ ವಂಚನೆ ಪ್ರಕರಣ ಈಗ ಮತ್ತೊಂದು ತಿರುವು ಪಡೆದಿದೆ. ಆಡಿಯೊ ಹರಿಯಬಿಟ್ಟು ದೇಶ ತೊರೆದಿದ್ದ ಆರೋಪಿ ಮನ್ಸೂರ್‌ ಖಾನ್‌ ಇದೀಗ ದಿಢೀರ್‌ ಅಂತ ಪ್ರತ್ಯಕ್ಷವಾಗಿದ್ದಾನೆ. ಆದರೆ, ಈ ಬಾರಿ ಆಡಿಯೊ ಬದಲು ವಿಡಿಯೊ ಹರಿಯಬಿಟ್ಟು ಸಾಕಷ್ಟು ವಿವಾದ ಹುಟ್ಟುಹಾಕಿದ್ದಾನೆ. ಘಟಾನುಘಟಿ ನಾಯಕರ ಹೆಸರು ಪ್ರಸ್ತಾಪಿಸಿರೋದು ತೀವ್ರ ಕುತೂಹಲ ಕೆರಳಿಸಿದೆ.

IMA ವಂಚನೆ ಬಗ್ಗೆ ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣ ಕುರಿತು ಎಸ್ಐಟಿ ತನಿಖೆ ತೀವ್ರಗೊಳಿಸಿದೆ. ಇದರ ಬೆನ್ನಲ್ಲೆ ಇಂದು ವಿಡಿಯೊ ರಿಲೀಸ್‌ ಮಾಡಿ ಹಲವರ ಹೆಸರು ಪ್ರಸ್ತಾಪಿಸಿದ್ದಾನೆ ಆರೋಪಿ ಖಾನ್‌. ಹೂಡಿಕೆದಾರರು ಮತ್ತು ನಗರ ಪೊಲೀಸ್ ಕಮೀಷನರ್‌ಗೆ ಸಹಕಾರ ನೀಡುವುದಾಗಿ ಹೇಳಿಕೊಂಡಿದ್ದಾನೆ. ಜೊತೆಗೆ ಪ್ರಮುಖ ರಾಜಕಾರಣಿಗಳಾದ ಉಬೇದುಲ್ಲಾ ಷರೀಫ್, ರೆಹಮಾನ್ ಖಾನ್ ಹಾಗು ಶರವಣ ಅವರು ನನಗೆ ಮೋಸ ಮಾಡಿದ್ದಾರೆ.. ಅವರಿಗೆ ದೇವರು ಒಳ್ಳೆಯದನ್ನು ಮಾಡಲಿ ಎಂದು ವಿಡಿಯೊದಲ್ಲಿ ಹೇಳಿಕೊಂಡಿದ್ದಾನೆ.

ಕಂಪನಿಯಲ್ಲಿ 21 ಸಾವಿರ ಜನರು ಕಳೆದ 12 ವರ್ಷಗಳಿಂದ ಹೂಡಿಕೆ ಮಾಡಿಕೊಂಡು ಬಂದಿದ್ದಾರೆ. ನನ್ನ ಬಳಿ 1,200 ಕೋಟಿ ರೂಪಾಯಿಗೂ ಅಧಿಕ ಆಸ್ತಿ ಇದೆ. ಬೆಂಗಳೂರಿಗೆ ಬರಲು ನಿರ್ಧರಿಸಿದ್ದೆ. ಆದರೆ ಜೂನ್ 14ರ ಶುಕ್ರವಾರ ಇಮಿಗ್ರೇಷನ್ ಕಾರಣಾಂತರಗಳಿಂದ ಬೆಂಗಳೂರಿಗೆ ವಾಪಸ್ ಬರಲಾಗಲಿಲ್ಲ. ಬೆಂಗಳೂರಿಗೆ ಬಂದರೆ ಜೀವ ಬೆದರಿಕೆ ಇದೆ. ಕೋರ್ಟ್, ಪಬ್ಲಿಕ್ ಪ್ಲೇಸ್ ಎಲ್ಲಾ ಕಡೆ ನನಗೆ ಜನ‌ ಹೊಡೆಯುತ್ತಾರೆ. ಆದ್ದರಿಂದ ಕಮಿಷನರ್ ಅಲೋಕ್ ಕುಮಾರ್ ನನಗೆ ಸಹಾಯ ಮಾಡಿ. ನನ್ನ ಹಳೆ ಮೊಬೈಲ್ ನಂಬರ್ ಇದೆ, ಅಲೋಕ್ ಕುಮಾರ್ ಸರ್ ಮೆಸೇಜ್ ಮಾಡಬಹುದು ಎಂದು ವೀಡಿಯೋದಲ್ಲಿ ಪ್ರಸ್ತಾಪಿಸಿದ್ದಾನೆ.

ಆದರೆ, ಮನ್ಸೂರ್‌ ಜನರಿಗೆ ಮೋಸ ಮಾಡಿ‌ ಪರಾರಿಯಾಗಿರೊ ಆರೋಪಿ. ಅವರಿಗೆ ಜೀವ ಬೆದರಿಕೆ ಇದ್ದರೆ ನಾವು ರಕ್ಷಣೆ ನೀಡುತ್ತೇವೆ ಅಂತಿದ್ದಾರೆ ಪೊಲೀಸರುಸಂಜೆ ವೇಳೆಗೆ ಮನ್ಸೂರ್ ವಿಡಿಯೋ ಬಿಡುಗಡೆ ಮಾಡುತ್ತಿದ್ದ ಸುದ್ದಿ ಪ್ರಸಾರವಾಗುತ್ತಿದ್ದಂತೆ ಜನ IMA ಜ್ಯುವೆಲ್ಲರ್ಸ್ ಬಳಿ ಜಮಾಯಿಸಿದ್ದರು. ಪ್ರತಿಭಟನೆ ಜಾಸ್ತಿಯಾಗುವ ಹಿನ್ನಲೆಯಲ್ಲಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಗುಂಪು ಚದುರಿಸಿದರು. ಅದೇನೆ ಇರಲಿ ಮನ್ಸೂರ್ ಖಾನ್ ವಾಪಸ್ಸಾಗಲಿ, ನಮಗೆ ಹಣ ಹಿಂದಿರುಗಿಸಲಿ ಎಂಬುದು ಹೂಡಿಕೆದಾರರ ಅಳಲು.

Comments are closed.