
ನವದೆಹಲಿ: ಮೇಕೆದಾಟು ಅಣೆಕಟ್ಟು ನಿರ್ಮಾಣ ವಿಚಾರವಾಗಿ ತಮಿಳುನಾಡು ಮತ್ತೆ ತಗಾದೆ ತೆಗೆದಿದೆ. ಯೋಜನೆಗೆ ಸಂಪೂರ್ಣ ಅನುಮತಿ ಕೋರಿ ರಾಜ್ಯ ಸರ್ಕಾರ ಪತ್ರ ಬರೆದ ಬೆನ್ನಲ್ಲೇ ತಮಿಳುನಾಡು ಕೂಡ ಇದಕ್ಕೆ ಅಪಸ್ವರ ಎತ್ತಿ ಕೇಂದ್ರಕ್ಕೆ ಪತ್ರ ಬರೆದಿದೆ.
ಮೇಕೆದಾಟು ಯೋಜನೆ ಈಗಾಗಲೇ ತಾತ್ವಿಕ ಒಪ್ಪಿಗೆ ಸಿಕ್ಕಿದ್ದರಿಂದ ಸಂಪೂರ್ಣ ಒಪ್ಪಿಗೆಗೆ ಅನುಮತಿ ಕೋರಿ ಅರಣ್ಯ-ಪರಿಸರ ಇಲಾಖೆಗೆ ಕರ್ನಾಟಕ ಸರ್ಕಾರ ಪತ್ರ ಬರೆದಿತ್ತು. ಕರ್ನಾಟಕದ ಪತ್ರದ ಬೆನ್ನಲ್ಲೇ ತಮಿಳುನಾಡು ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಕೂಡ ಪ್ರಧಾನಿಗೆ ಬರೆದಿದ್ದಾರೆ.
ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಅನುಮತಿ ಬೇಡ. ಮೇಕೆದಾಟು ಯೋಜನೆಯಿಂದ ನಮ್ಮ ಪಾಲಿನ ನೀರಿಗೆ ಧಕ್ಕೆಯಾಗಲಿದೆ. ಈಗಾಗಲೇ ಕೇಂದ್ರ ಜಲಸಂಪನ್ಮೂಲ ಇಲಾಖೆ ತಾತ್ವಿಕ ಒಪ್ಪಿಗೆ ನೀಡಿದೆ. ಯಾವ ಕಾರಣಕ್ಕೂ ಯೋಜನೆ ಜಾರಿಗೆ ಸಂಪೂರ್ಣ ಒಪ್ಪಿಗೆ ನೀಡಬೇಡಿ. ಈ ವಿಚಾರ ಪ್ರಸ್ತಾಪಿಸಲು ಭೇಟಿಗೆ ಸಮಯಾವಕಾಶ ನೀಡಿ ಎಂದು ಪತ್ರದಲ್ಲಿ ಪ್ರಧಾನಿಗೆ ತಮಿಳುನಾಡು ಸಿಎಂ ಮನವಿ ಮಾಡಿದ್ದಾರೆ.
Comments are closed.