ಕರ್ನಾಟಕ

ಐಎಂಎ ವಂಚನೆ ಪ್ರಕರಣದ ರೂವಾರಿ ಮೊಹಮದ್ ಮನ್ಸೂರ್ ಖಾನ್ ಶರಣಾದರೆ ಸೂಕ್ತ ರಕ್ಷಣೆ: ಸಚಿವ ಜಮೀರ್

Pinterest LinkedIn Tumblr

ಬೆಂಗಳೂರು: ಐಎಂಎ ಸಂಸ್ಥೆ ವಂಚನೆ ಪ್ರಕರಣದ ರೂವಾರಿ ಮೊಹಮದ್ ಮನ್ಸೂರ್ ಖಾನ್ ಯಾರಿಗೂ ಹೆದರುವ ಅಗತ್ಯವಿಲ್ಲ ಪೊಲೀಸರಿಗೆ ಶರಣಾಗಿ ವಾಸ್ತವ ಸಂಗತಿ ಏನು ಎನ್ನುವುದನ್ನು ಬಹಿರಂಗಪಡಿಸಬೇಕು ಎಂದು ವಕ್ಫ್ ಮತ್ತು ಅಲ್ಪಸಂಖ್ಯಾತ ಸಚಿವ ಜಮೀರ್‌ ಅಹ್ಮದ್ ಖಾನ್ ಒತ್ತಾಯಿಸಿದ್ದಾರೆ.

ಆರೋಪಿ ಮೊಹಮದ್ ಮನ್ಸೂರ್ ತಕ್ಷಣವೇ ಶರಣಾದರೆ ಸರ್ಕಾರ ಅವರಿಗೆ ಸೂಕ್ತ ರಕ್ಷಣೆ ಒದಗಿಸಲಿದೆ ಎಂದು ಅಭಯ ನೀಡಿರುವ ಅವರು, ರಕ್ಷಣೆ ಸಂಬಂಧ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಜೊತೆ ವೈಯಕ್ತಿವಾಗಿ ಮಾತನಾಡುವುದಾಗಿಯೂ ತಿಳಿಸಿದ್ದಾರೆ.

ವಿಕಾಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ತಾವು ಮನ್ಸೂರ್ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲೂ ಸರ್ಕಾರ ನಿಮ್ಮ ಜೊತೆ ಇದೆ. ಮುಂದೆ ಬಂದು ಸತ್ಯ ಹೇಳಿ ಎಂದು ಧೈರ್ಯ ತುಂಬಿದ್ದಾಗಿ ಸ್ಪಷ್ಟಪಡಿಸಿದರು.

Comments are closed.