
ರಾಮನಗರ: ಕೆರೆಗಳಿಗೆ ನೀರು ತುಂಬಿಸುವ ನಾಟಕ ಮುಗಿತು. ಕಳೆದ ವರ್ಷ ಎಷ್ಟು ಕೆರೆಗೆ ನೀರು ಹರಿಸಿದ್ದಾರೆ ಎಂಬ ಮಾಹಿತಿ ಇದೆ ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಮಾಜಿ ಶಾಸಕ ಸಿ.ಪಿ ಯೋಗೇಶ್ವರ್ಗೆ ಟಾಂಗ್ ನೀಡಿದ್ದಾರೆ.
ರಾಮನಗರದಲ್ಲಿ ಸೋಮವಾರ ಮಾಧ್ಯಮದ ಜೊತೆ ಮಾತನಾಡಿದ ಅವರು, ಏತ ನೀರಾವರಿ ಯೋಜನೆ ಮೂಲಕ ಶಾಶ್ವತ ನೀರು ಸಿಗುವುದಿಲ್ಲ. ಕಾವೇರಿ ನಿರ್ವಹಣಾ ಮಂಡಳಿ ನೀರಿನ ಬಗ್ಗೆ ನಿಗಾ ಇಟ್ಟಿದೆ. ಏತ ನೀರಾವರಿ ಯೋಜನೆ ತಾತ್ಕಾಲಿಕವಾದುದ್ದು. ಅದಕ್ಕಾಗಿ ಸತ್ತೆಗಾಲದಿಂದ ಗುರುತ್ವಾಕರ್ಷಣೆಯ ಮೂಲಕ ಇಗ್ಗಲೂರು ಬ್ಯಾರೇಜ್ ಗೆ ನೀರು ಹರಿಸುತ್ತೇವೆ ಎಂದರು.
ನನ್ನ ಬಗ್ಗೆ ಅನುಮಾನ ಬೇಡ ನಿಮ್ಮ ಸಮಸ್ಯಗೆ ಸ್ಪಂದಿಸುತ್ತೇನೆ. ಸರ್ಕಾರವನ್ನು ಮುಂದಿನ ನಾಲ್ಕು ವರ್ಷ ಹೇಗೆ ನಡೆಸಬೇಕು ಎಂಬುದು ನನಗೆ ಗೊತ್ತಿದೆ. ಎರಡು ತಿಂಗಳ ನಂತರ ಮತ್ತೆ ಚನ್ನಪಟ್ಟಣಕ್ಕೆ ಬರುತ್ತೇನೆ. ನಿಮ್ಮ ಎಲ್ಲ ಕೆಲಸ ಸಂಪೂರ್ಣ ಮಾಡಿಕೊಡುತ್ತೇನೆ ಎಂದು ಅವರು ನುಡಿದರು.
ಮಂಡ್ಯದಲ್ಲಿ ರೈತ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ವಿಚಾರ ಬಗ್ಗೆ ಮಾತನಾಡಿದ ಅವರು, ಈ ವಿಷಯ ನನಗೆ ಈಗ ಗೊತ್ತಾಯ್ತು. ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆ ಮಾಡಿಕೊಳ್ಳದಂತೆ ಸಿಎಂ ಮನವಿ ಮಾಡಿದ ಅವರು ರೈತನ ಆತ್ಮಕ್ಕೆ ಶಾಂತಿ ಸಿಗಲಿ. ಮುಂದಿನ ದಿನ ಆ ಭಾಗಕ್ಕೆ ಹೋದಾಗ ಆ ಹಳ್ಳಿಗೆ ಭೇಟಿ ನೀಡುತ್ತೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.
Comments are closed.