ಕರ್ನಾಟಕ

ಮಳೆಗೆ ಮತ್ತೆ ಕುಸಿಯಲಿದೆ ಕರ್ನಾಟಕದ ಕಾಶ್ಮೀರ ಕೊಡಗು!!

Pinterest LinkedIn Tumblr


ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಪ್ರಾರಂಭವಾಗಿದ್ದು ಮಳೆಗಾಲದಲ್ಲಿ ಭಾರೀ ವಾಹನ ಸಾಗಾಟದಿಂದ ರಸ್ತೆ ಹದಗೆಡುವುದರಿಂದಾಗಿ ಹಾಗೂ ಸಾರ್ವಜನಿಕ ಜೀವ ಮತ್ತು ಆಸ್ತಿಗಳ ಹಿತದೃಷ್ಟಿಯಿಂದ ಮರಳು, ಮರದ ದಿಮ್ಮಿ ಸಾಗಣೆ ಹಾಗೂ ಭಾರೀ ವಾಹನ ಸಂಚಾರ ನಿಷೇಧಿಸಿ ಕೊಡಗು ಜಿಲ್ಲಾಧಿಕಾರಿ ಅನೀಸ್‌ ಕಣ್ಮನಿ ಜಾಯ್‌ ಆದೇಶ ಹೊರಡಿಸಿದ್ದಾರೆ. ಈ ಆದೇಶ ಜೂ.12 ರಿಂದ ಆಗಸ್ಟ್ 8 ರವರೆಗೆ ಅನ್ವಯವಾಗಲಿದೆ

16,200 ಕೆ.ಜಿ.ಗಿಂತ ಹೆಚ್ಚಿನ ತೂಕ ಸಾಗಾಣಿಕೆ ವಾಹನ / ಮಲ್ಟಿ ಆಕ್ಸಿಲ್ ಟ್ರಕ್​ಗಳ ಸಂಚಾರ ಮತ್ತು ಭಾರೀ ವಾಹನಗಳದ ಬುಲೆಟ್ ಟ್ಯಾಂಕರ್ಸ್. ಶಿಪ್ ಕಾರ್ಗೋ ಕಂಟೈನರ್ಸ್. ಲಾಂಗ್ ಚಾಸಿಸ್ ಮತ್ತು ಮರಳು ಸಾಗಾಣಿಕೆ. ಮರದ ದಿಮ್ಮಿಗಳನ್ನು ಸಾಗಿಸದಂತೆ ಸಂಚಾರ ನಿಷೇಧಿಸಲಾಗಿದ್ದು, ಅಡುಗೆ ಅನಿಲ, ಇಂಧನ, ಹಾಲು ಪೂರೈಕೆ, ಸಾರ್ವಜನಿಕ ಬಸ್‌ಗಳಿಗೆ, ಸರ್ಕಾರಿ ಕೆಲಸಕ್ಕೆ ಬಳಸುವ ಭಾರೀ ವಾಹನ, ಶಾಲಾ ಕಾಲೇಜು ವಾಹನಗಳಿಗೆ ವಿನಾಯಿತಿ ನೀಡಲಾಗಿದೆ.

ಕೊಡಗು ಜಿಲ್ಲೆ ಪ್ರವಾಸೀ ತಾಣವಾಗಿರುವುದರಿಂದ ಸಾಕಷ್ಟು ಪ್ರವಾಸಿಗರ ವಾಹನಗಳ ದಟ್ಟಣೆಯು ಕೊಡುಗು ಜಿಲ್ಲೆಗೆ ಹೆಚ್ಚಾಗಿ ಆಗಮಿಸುತ್ತಿದ್ದು ಜೊತೆಗೆ ಅಧಿಕ ಭಾರ ತುಂಬಿದ ಭಾರೀ ಸರಕು ಸಾಗಾಣೆ ವಾಹನಗಳು ದಿನನಿತ್ಯ ಸಂಚರಿಸುತ್ತಿರುತ್ತದೆ. ಕಳೆದ ವರ್ಷ ಉಂಟಾದ ಪ್ರಕೃತಿ ವಿಕೋಪದಿಂದ ಪ್ರಾಣ ಹಾನಿಯೊಂದಿಗೆ ಭಾರೀ ಪ್ರಮಾಣದಲ್ಲಿ ಸಾರ್ವಜನಿಕ ಆಸ್ತಿ ನಷ್ಟವಾಗಿತ್ತು ಆದ್ದುರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರ ಸುರಕ್ಷತೆಯ ದೃಷ್ಟಿಯಿಂದ ಪ್ರಯಾಣಿಕರ ವಾಹನ ಹಾಗೂ ಅತ್ಯವಶ್ಯ ವಾಹನಗಳನ್ನು ಹೊರತು ಪಡಿಸಿ ಅಧಿಕ ಭಾರದ ಸರುಕು ಸಾಗಾಣಿಕೆ ವಾಹನಗಳು ಹಾಗೂ ಮರಳು ಮತ್ತು ಮರದ ದಿಮ್ಮಿಗಳನ್ನು ಸಾಗಿಸುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಮುಕ್ತಾಯವಾಗುವವರೆಗೆ ನಿಷೇಧಿಸಿದ್ದಾರೆ

Comments are closed.