ಕರ್ನಾಟಕ

ಗ್ರಾಹಕರಿಗಾಗಿ ಕಡಿಮೆ ಬೆಲೆಯ ‘ನೋಕಿಯಾ 2.2‘ ಸ್ಮಾರ್ಟ್​ಫೋನ್ ಬಿಡುಗಡೆ

Pinterest LinkedIn Tumblr


ಎಚ್​ಎಂಡಿ ಗ್ಲೋಬಲ್​ ಸಂಸ್ಥೆ ನೋಕಿಯಾ ನೂತನ ಸ್ಮಾರ್ಟ್​ಫೋನ್​​​​​​​ವೊಂದನ್ನು​ ಗುರುವಾರ ಬಿಡುಗಡೆ ಮಾಡಿದೆ. ಗ್ರಾಹಕರಿಗಾಗಿ ಈ ಬಾರಿ ಕಡಿಮೆ ಬೆಲೆಯ ‘ನೋಕಿಯಾ 2.2‘ ಸ್ಮಾರ್ಟ್​ಫೋನ್​​​​​​​​ ಅನ್ನು ತಯಾರಿಸಲಾಗಿದೆ.

ಎಚ್​ಎಂಡಿ ಸಂಸ್ಥೆ ಪ್ರಸುತ್ತ ಬಿಡುಗಡೆಗೊಳಿಸಿದ ನೋಕಿಯಾ 2.2 ಸ್ಮಾರ್ಟ್​ಫೋನ್​ 5.71 ಇಂಚಿನ ಡಿಸ್​​ಪ್ಲೇ ಹೊಂದಿದೆ. ಹೆಲಿಯೋ A22 ಚಿಪ್​ನಿಂದ ಕಾರ್ಯನಿರ್ವಹಿಸುತ್ತಿದೆ.

ನೂತನ ಸ್ಮಾರ್ಟ್​ಫೋನ್​​​​​​​​ ಮುಂಭಾಗದಲ್ಲಿ 13 ಮೆಗಾಫಿಕ್ಸೆಲ್​ ಕ್ಯಾಮೆರಾ ಮತ್ತು ಸಿಂಗಲ್​​ ಫ್ಲಾಶ್​ ನೀಡಲಾಗಿದೆ. ಫೋಟೋಗಾಗಿ ‘ಅಟೋ ಎಚ್​ಆರ್​ಡಿ’ ಮತ್ತು ‘ಲೋ ಲೈಟ್​ ಇಮೇಜ್​​ ಫ್ಯೂಶನ್’​ ಆಯ್ಕೆಯನ್ನು ಒಳಗೊಂಡಿದೆ. ಇನ್ನು ಸೆಲ್ಫಿಗಾಗಿ 5 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು ಅಳವಡಿಸಲಾಗಿದೆ. ನೋಕಿಯಾ 2.2 ಸ್ಮಾರ್ಟ್​ಫೋನ್​ ಇದೀಗ ಆ್ಯಂಡ್ರಾಯ್ಡ್​​ 9 ಪೈ ಒಎಸ್​ ಅಳವಡಿಸಿದ್ದು ಮುಂದಿನ ದಿನಗಳಲ್ಲಿ ಆ್ಯಂಡ್ರಾಯ್ಡ್​​​ ಕ್ಯೂಗೆ ಅಪ್ಡೇಟ್ ಆಗಲಿದೆ.

ನೋಕಿಯಾ 2.2 ಸ್ಮಾರ್ಟ್​ಫೋನ್​ ಎರಡು ವೇರಿಯಂಟ್​ಗಳಲ್ಲಿ ಲಭ್ಯವಿದೆ. 2GB RAM​ ಮತ್ತು 16 GB ಸ್ಟೊರೇಜ್​ ಹೊಂದಿರುವ ನೋಕಿಯಾ 2.2 ಸ್ಮಾರ್ಟ್​ಫೋನ್ 6,999 ರೂ ಬೆಲೆ ಹೊಂದಿದೆ . 3GB RAM​ ಮತ್ತು 32GB ಸ್ಟೊರೇಜ್​ ಹೊಂದಿರುವ ಸ್ಮಾರ್ಟ್​ಫೋನ್​ 7,999 ರೂ ಬೆಲೆ ಹೊಂದಿದೆ. ಇನ್ನು ರಿಲಾಯನ್ಸ್​​​​ ಜಿಯೋ ಸಬ್​​ಸ್ಕ್ರೈಬರ್​ ನೂತನ ಸ್ಮಾರ್ಟ್​ಫೋನ್​​ ಅನ್ನು ಖರೀದಿಸಿದರೆ 2,200 ರೂ. ಕ್ಯಾಶ್​ಬ್ಯಾಕ್​ ಜೊತೆಗೆ 100GB ಉಚಿತ ಡೇಟಾವನ್ನು ನೀಡುತ್ತಿದೆ.

Comments are closed.