ಹೊರಗಡೆ ಮಳೆ ಸುರಿತಿದೆ. ಬಿಸಿ ಬಿಸಿಯಾಗಿ ಚಿಕನ್ ಅಡುಗೆ ಮಾಡಿ ತಿನ್ನೋಣ ಅಂತ ಅಂಗಡಿಯಿಂದ ಚಿಕನ್ ತರ್ತಿದ್ದೀರಾ? ಹಾಗಿದ್ದರೇ ಹುಷಾರು. ನೀವು ತಂದಿರೋ ಚಿಕನ್ ಜೊತೆ ಹುಳುಗಳು ಫ್ರೀಯಾಗಿ ಬಂದಿರಬಹುದು. ಇಂತಹುದೇ ಘಟನೆಯೊಂದು ನಡೆದಿದ್ದು, ವಿವರ ಇಲ್ಲಿದೆ ನೋಡಿ.
ಕೊಡಗಿನ ಮಡಿಕೇರಿ ತಾಲ್ಕೂಕಿನ ಮೂರ್ನಾಡು ಹರೀಶ್ ಎಂಬುವವರು ನಿಹಾರ್ ಚಿಕನ್ ಸ್ಟಾಲ್ ನಿಂದ ಕೋಳಿ ಮಾಂಸ ಖರೀದಿ ಮಾಡಿ ಮನೆಗೆ ತಂದಿದ್ರು. ಹೀಗೆ ತಂದಿದ್ದ ಮಾಂಸದ ತುಂಬೆಲ್ಲಾ ಬರೀ ಹುಳಗಳು ಪತ್ತೆಯಾಗಿವೆ. ಇನ್ನು ಇದರ ಬಗ್ಗೆ ಕೋಳಿ ಅಂಗಡಿ ಮಾಲೀಕನನ್ನ ಯಾಕೆ ಹೀಗೆ ಎಂದು ಕೇಳಿದರೆ ಆತ ಏನೋ ಸಬೂಬು ಹೇಳಿ ಕಳುಹಿಸಿದ್ದಾನೆ.
ಈ ಚಿಕನ್ ಅಂಗಡಿಯವನು ಈ ಹಿಂದೆಯೂ ಹೀಗೆ ಕಳಪೆ ಹಾಗೂ ಅವಧಿ ಮೀರಿದ ಮಾಂಸಾಹಾರ ಮಾರಾಟ ಮಾಡಿದ್ದಾರೆ ಎನ್ನಲಾಗಿದ್ದು, ಹರೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.