ಕರ್ನಾಟಕ

ರಾಜ್ಯ ಸರ್ಕಾರದಿಂದ ಎಸ್​​ಸಿ/ಎಸ್​​ಟಿ, ಮಹಿಳೆಯರು, ರೈತರಿಗೆ ಭಾರೀ ಉಡುಗೊರೆ!

Pinterest LinkedIn Tumblr


ಬೆಂಗಳೂರು: ಬಡವರ ಬಂಧು ಸ್ಕೀಮ್​​ ಮಾದರಿಯಲ್ಲೇ ಕಾಂಗ್ರೆಸ್​-ಜೆಡಿಎಸ್​​ ಮೈತ್ರಿ ಸರ್ಕಾರ ಮತ್ತಷ್ಟು ಯೋಜನೆಗಳನ್ನು ಘೋಷಿಸಿದೆ. ಮಹಿಳೆಯರಿಗೆ 10,000 ರೂಪಾಯಿ ಸಹಾಯಧನ; ಕ್ರೈಸ್ತ ವಸತಿ ಶಾಲೆಗಳ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆ ವಿಸ್ತರಣೆ; ಬಾಡಿಗೆಯ ಬದಲು ಸ್ವಂತ ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ ಒತ್ತು ನೀಡುವುದು; ಇದಕ್ಕಾಗಿ 600 ಕೋಟಿ ರೂ. ಹೆಚ್ಚಿನ ಹಣ ಮೀಸಲಿಡಲಾಗಿದೆ ಎಂದು ಖುದ್ದು ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ಅವರೇ ತಿಳಿಸಿದ್ದಾರೆ.

ಇಂದು ನಗರದ ಸುದ್ದೀಗೋಷ್ಠಿಯಲ್ಲಿ ಮಾತಾಡಿದ ಸಚಿವ ಪ್ರಿಯಾಂಕ ಖರ್ಗೆಯವರು, ರೇಷ್ಮೆಹುಳು ಸಾಕುವವರಿಗೆ ಶೇ. 90 ರಷ್ಟು ಸಹಾಯಧನ ನೀಡಲಾಗುವುದು. ಹಾಗೆಯೇ ರೈತರಿಗೆ ಟ್ರ್ಯಾಕ್ಟರ್ ಖರೀದಿಸಲು 3 ಲಕ್ಷ ರೂ. ವರೆಗೆ ಸಹಾಯಧನ ಮಾಡಲಾಗುವುದು. ಮೀನು ಮಳಿಗೆ ಸ್ಥಾಪಿಸಲು 7 ಲಕ್ಷ ರೂ.ವರೆಗೆ ಸಹಾಯಧನ. ಪರಿಶಿಷ್ಟ ಜಾತಿ ಪಂಗಡದವರಿಗೆ ಹಾಲಿನ ದರ ಹೆಚ್ಚಳ ಮಾಡುವ ಬಗ್ಗೆಯೂ ಪ್ರಸ್ತಾವನೆ ಇದೆ ಎಂದು ಜನರಿಗೆ ಸಿಹಿಸುದ್ದಿ ನೀಡಿದ್ದಾರೆ.

ಈ ಹಿಂದೆಯೇ ಮೈತ್ರಿ ಸರ್ಕಾರದ ಮಹತ್ವದ ‘ಬಡವರ ಬಂಧು’ ಯೋಜನೆ ಘೋಷಿಸಿತ್ತು. ಖುದ್ದು ಸಿಎಂ ಹೆಚ್​.ಡಿ. ಕುಮಾರಸ್ವಾಮಿಯವರೇ ಯೋಜನೆಗೆ ಚಾಲನೆ ನೀಡಿದ್ದರು. ಬಳಿಕ ಮೋದಿ ಸರ್ಕಾರ್ ಮಹತ್ವಾಕಾಂಕ್ಷಿ ಮುದ್ರ ಯೋಜನೆ ಮಾದರಿಯ ಯೋಜನೆ ಇದು ಎನ್ನಲಾಗಿತ್ತು.

‘ಬಡವರ ಬಂಧು’ ಯೋಜನೆ ಬೀದಿ ಬದಿ ವರ್ತಕರಿಗೆ ಶೂನ್ಯ ಬಡ್ಡಿದರದಲ್ಲಿ ₹ 10 ಸಾವಿರ ರೂಪಾಯಿ ವರೆಗೆ ಸಾಲ ನೀಡುತ್ತಿದೆ. ಮೀಟರ್ ಬಡ್ಡಿ ದಂಧೆಗೆ ಶಾಶ್ವತ ಪರಿಹಾರ ನೀಡುವ ಕ್ರಮಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ, ಬಡ್ಡಿ, ಸಾಲದ ಶೂಲಕ್ಕೆ ಸಿಲುಕಿರುವ ಜನರ ನೆರವಿಗೆ ಬರಲು ‘ಬಡವರ ಬಂಧು’ ಯೋಜನೆಯನ್ನು ಜಾರಿಗೆ ತಂದಿತ್ತು. ಈ ಯೋಜನೆ ಇಂದ ಬೀದಿ ಬದಿ ವ್ಯಾಪಾರಿಗಳಿಗೆ ಸದ್ಯ ಬಡ್ಡಿಯೇ ಇಲ್ಲದ ದಿನದ ಸಾಲ ಲಭ್ಯವಾಗುತ್ತಿದೆ.

Comments are closed.