ಬೆಂಗಳೂರು: ರಾಜ್ಯದ 63 ಸ್ಥಳೀಯ ನಗರ ಸಂಸ್ಥೆ ಚುನಾವಣೆಯ ಫಲಿತಾಂಶ ಬಹುತೇಕ ಪ್ರಕಟವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಹೀನಾಯ ಸೋಲುಂಡಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಈ ಸ್ಥಳೀಯ ಚುನಾವಣೆಯಲ್ಲಿ ಮೈತ್ರಿ ಇಲ್ಲದೆಯೇ ಉತ್ತಮ ಸಾಧನೆ ಮಾಡಿವೆ. ಕಳೆದ ಬಾರಿಯ ಸ್ಥಳೀಯ ಚುನಾವಣೆಗೆ ಹೋಲಿಸಿದರೆ ಈ ಬಾರಿ ಬಿಜೆಪಿಯದ್ದೂ ಸ್ವಲ್ಪ ಬಲ ವೃದ್ಧಿಸಿದೆ. 57 ಸ್ಥಳೀಯ ಸಂಸ್ಥೆಗಳ ಫಲಿತಾಂಶ ಪ್ರಕಟವಾಗಿದ್ದು, ಇವುಗಳ 1,221 ವಾರ್ಡ್ಗಳ ಪೈಕಿ ಕಾಂಗ್ರೆಸ್ 509 ವಾರ್ಡ್ಗಳನ್ನು ಗೆದ್ದುಕೊಂಡಿದೆ. ಬಿಜೆಪಿ 366 ಸ್ಥಾನದಲ್ಲಿ ಗೆದ್ದರೆ, ಜೆಡಿಎಸ್ 174 ವಾರ್ಡ್ಗಳನ್ನ ಬುಟ್ಟಿಗೆ ಹಾಕಿಕೊಂಡಿದೆ. 160 ವಾರ್ಡ್ಗಳು ಪಕ್ಷೇತರರ ಪಾಲಾಗಿವೆ.
ಎಂಟು ನಗರಪಾಲಿಕೆಗಳ ಪೈಕಿ ಏಳರಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಕ್ಕಿಲ್ಲ. ಸಾಗರ ನಗರಪಾಲಿಕೆಯಲ್ಲಿ ಮತ ಎಣಿಕೆ ಇವತ್ತು ನಡೆದಿಲ್ಲ. ಜೂನ್ 3ರಂದು ಮತ ಎಣಿಕೆಯಾಗಲಿದೆ. ಇನ್ನುಳಿದ ಎಲ್ಲಾ ಏಳು ನಗರಪಾಲಿಕೆಯಲ್ಲಿ ಅತಂತ್ರ ಫಲಿತಾಂಶ ಬಂದಿದೆ.
33 ಪುರಸಭೆಗಳ ಪೈಕಿ 31ರಲ್ಲಿ ಫಲಿತಾಂಶ ಪ್ರಕಟವಾಗಿದೆ. ಅದರಲ್ಲಿ ಕಾಂಗ್ರೆಸ್ ಪಕ್ಷವೇ 13ರಲ್ಲಿ ಭರ್ಜರಿ ಬಹುಮತ ಪಡೆದು ತನ್ನದಾಗಿಸಿಕೊಂಡಿದೆ. ಬಿಜೆಪಿ ವಶಕ್ಕೆ 5 ಪುರಸಭೆಗಳು ಬಂದಿವೆ. ಜೆಡಿಎಸ್ ಪಕ್ಷ 2 ಪುರಸಭೆಗಳನ್ನ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇನ್ನುಳಿದ 11 ಪುರಸಭೆಗಳಲ್ಲಿ ಅತಂತ್ರ ಫಲಿತಾಂಶ ಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಮತ್ತು ನೆಲಮಂಗಲ ಪುರಸಭೆಗಳಲ್ಲಿ ಇವತ್ತು ಮತ ಎಣಿಕೆಯಾಗಿಲ್ಲ.
22 ಪಟ್ಟಣ ಪಂಚಾಯಿತಿ ಪೈಕಿ 18 ಪಟ್ಟಣ ಪಂಚಾಯಿತಿಯ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ ಬರೋಬ್ಬರಿ 8ರಲ್ಲಿ ನಿಚ್ಚಳ ಬಹುಮತ ಗಳಿಸಿದೆ. ಕಾಂಗ್ರೆಸ್ ಪಕ್ಷ ಮೂರು ಪಟ್ಟಣ ಪಂಚಾಯಿತಿಗಳನ್ನ ಗೆದ್ದುಕೊಂಡಿದೆ. ಇನ್ನುಳಿದ 7 ಪಟ್ಟಣ ಪಂಚಾಯಿತಿಯಲ್ಲಿ ಅತಂತ್ರ ಫಲಿತಾಂಶ ಬಂದಿದೆ.
ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ:
ಫಲಿತಾಂಶ ಪ್ರಕಟವಾದ ಒಟ್ಟು ವಾರ್ಡ್ಗಳು: 1,221
ಕಾಂಗ್ರೆಸ್: 509
ಬಿಜೆಪಿ: 366
ಜೆಡಿಎಸ್: 174
ಬಿಎಸ್ಪಿ: 3
ಪಕ್ಷೇತರರು: 160
ಇತರರು: 7
ಬಿಜೆಪಿ ಬಹುಮತ ಗಳಿಸಿದ ಸಂಸ್ಥೆಗಳು:
ನಗರಸಭೆ: 0
ಪುರಸಭೆ: 5
ಪಟ್ಟಣ ಪಂಚಾಯಿತಿ: 9
ಒಟ್ಟು: 14
ಕಾಂಗ್ರೆಸ್ ಬಹುಮತ ಗಳಿಸಿದ ಸಂಸ್ಥೆಗಳು:
ನಗರಸಭೆ: 2
ಪುರಸಭೆ: 13
ಪಟ್ಟಣ ಪಂಚಾಯಿತಿ: 3
ಒಟ್ಟು: 18
ಜೆಡಿಎಸ್ ಬಹುಮತ ಗಳಿಸಿದ ಸಂಸ್ಥೆಗಳು:
ನಗರಸಭೆ: 0
ಪುರಸಭೆ: 2
ಪಟ್ಟಣ ಪಂಚಾಯಿತಿ: 0
ಒಟ್ಟು: 2
ನಗರ ಪಾಲಿಕೆಗಳ ಪ್ರಕಟಿತ ಫಲಿತಾಂಶ:
ನಗರ ಪಾಲಿಕೆ ಒಟ್ಟು ಸ್ಥಾನ ಬಿಜೆಪಿ ಕಾಂಗ್ರೆಸ್ ಜೆಡಿಎಸ್ BSP ಪಕ್ಷೇತರ ಇತರರು
ಹಿರಿಯೂರು 31 6 13 3 0 9 0
ಹರಿಹರ 31 5 10 14 0 2 0
ಶಿಡ್ಲಘಟ್ಟ 31 2 13 10 2 4 0
ತಿಪಟೂರು 31 11 9 5 0 6 0
ನಂಜನಗೂಡು 31 15 10 3 0 3 0
ಬಸವಕಲ್ಯಾಣ 31 5 19 3 0 0 4
ಶಹಾಪುರ 31 12 16 0 0 1 0
ಒಟ್ಟು 217 56 90 38 2 25 6
ಪುರಸಭೆಗಳ ಪ್ರಕಟಿತ ಫಲಿತಾಂಶ
ಪುರಸಭೆ ಒಟ್ಟು ಸ್ಥಾನ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಪಕ್ಷೇತರರು ಇತರರು
ಆನೇಕಲ್ 27 10 17 0 0 0
ಬಂಗಾರಪೇಟೆ 27 1 20 2 4 0
ಶ್ರೀನಿವಾಸಪುರ 23 0 8 11 4 0
ಮಾಲೂರು 27 10 11 1 5 0
ಬಾಗೇಪಲ್ಲಿ 23 0 13 1 7 2
ಪಾವಗಡ 23 0 20 2 1 0
ಕುಣಿಗಲ್ 23 4 14 3 2 0
ಕೆ.ಆರ್. ನಗರ 23 1 14 8 0 0
ಬನ್ನೂರು 23 2 7 12 2 0
ಕಡೂರು 23 6 7 6 4 0
ಮೂಡಬಿದ್ರಿ 23 12 11 0 0 0
ಮಳವಳ್ಳಿ 23 2 5 9 7 0
ಕೆಆರ್ ಪೇಟೆ 23 1 10 11 1 0
ಶ್ರೀರಂಗಪಟ್ಟಣ 23 1 8 12 2 0
ಗುಂಡ್ಲುಪೇಟೆ 23 13 8 0 1 1
ತಾಳಿಕೋಟೆ 23 3 3 1 16 0
ಬ. ಬಾಗೇವಾಡಿ 23 6 13 0 4 0
ಇಂಡಿ 23 11 8 2 2 0
ನವಲಗುಂದ 23 6 7 9 1 0
ಮುಂಡರಗಿ 23 12 6 1 4 0
ನರಗುಂದ 23 17 6 0 0 0
ಬ್ಯಾಡಗಿ 23 13 6 0 4 0
ಶಿಗ್ಗಾಂವ್ 23 9 6 0 8 0
ಭಟ್ಕಳ 23 1 4 0 18 0
ಭಾಲ್ಕಿ 27 4 18 4 1 0
ಹುಮ್ನಾಬಾದ್ 27 4 19 3 0 1
ಚಿಟಗುಪ್ಪ 23 6 13 3 0 1
ಸಂಡೂರು 23 10 12 0 1 0
ಹೂ. ಹಡಗಲಿ 23 9 14 0 0 0
ಹರಪನಹಳ್ಳಿ 27 10 14 1 2 0
ಒಟ್ಟು 714 184 322 102 102 4
ಪಟ್ಟಣ ಪಂಚಾಯಿತಿಗಳ ಪ್ರಕಟಿತ ಫಲಿತಾಂಶ:
ಪ. ಪಂಚಾಯಿತಿ ಒಟ್ಟು ಸ್ಥಾನ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಪಕ್ಷೇತರ ಇತರೆ
ಮೊಳಕಾಲ್ಮೂರು 16 8 6 2 0 0
ಹೊಳಲ್ಕೆರೆ 16 6 3 0 7 0
ತುರುವೇಕೆರೆ 14 6 2 5 1 0
ಕೊಪ್ಪ 11 6 4 0 1 0
ಶೃಂಗೇರಿ 11 7 3 0 1 0
ಮೂಡಿಗೆರೆ 11 6 4 1 0 0
ಎನ್.ಆರ್. ಪುರ 11 2 9 0 0 0
ಮುಲ್ಕಿ 18 8 9 1 0 0
ಸುಳ್ಯ 20 14 4 0 2 0
ಆಲೂರು 11 2 1 5 3 0
ಅರಕಲಗೂಡು 17 6 5 6 0 0
ಯಳಂದೂರು 11 1 10 0 0 0
ಹನೂರು 13 3 4 6 0 0
ಕಲಘಟಗಿ 17 9 3 2 3 0
ಅಳ್ನಾವರ 18 3 8 6 1 0
ಹೊನ್ನಾವರ 20 12 1 2 5 0
ಸಿದ್ದಾಪುರ 15 14 1 0 0 0
ಔರಾದ್ 20 12 6 0 2 0
ಕಮಲಾಪುರ 20 1 14 0 5 0
ಒಟ್ಟು 290 126 97 34 33 0