ಮಂಡ್ಯ: ಸಂಸದೆ ಸುಮಲತಾ ಅಂಬರೀಷ್, ಮಂಡ್ಯದ ಸಂಜಯ್ ಥಿಯೇಟರ್‌ಗೆ ಆಗಮಿಸಿ, ಪುತ್ರ ಅಭಿಷೇಕ್ ನಟನೆಯ ಅಮರ್ ಸಿನಿಮಾ ವೀಕ್ಷಿಸಿದರು.
ಇನ್ನು ಪ್ರೇಕ್ಷಕರ ಜೊತೆ ಸಿನಿಮಾ ವೀಕ್ಷಿಸಿದ ಸುಮಲತಾ ಅಂಬರೀಷ್, ಅಮರ್ ಅಭಿಷೇಕ್ ಫಸ್ಟ್ ಫಿಲ್ಮ್, ಬೆಂಗಳೂರಿನ ನರ್ತಕಿ ಥಿಯೇಟರ್ ನಲ್ಲಿ ನೋಡ್ದೆ. ಅಂಬರೀಷ್ ಮೇಲೆ ಜನ ಅಪಾರ ಪ್ರೀತಿ ಇಟ್ಟಿದ್ದಾರೆ. ಮಂಡ್ಯದಲ್ಲಿ ಸಿನಿಮಾ ನೋಡಬೇಕು ಅಂತ ಬಂದಿದ್ದೇನೆ ಎಂದು ಹೇಳಿದ್ದಾರೆ.
ಅಂಬರೀಷ್‌ಗೆ ಜನ ಆಶೀರ್ವಾದ ಮಾಡಿದಂತೆ ಅಭಿಷೇಕ್‌ಗೂ ಮಾಡ್ತಾರೆ. ತಂದೆ-ತಾಯಂದಿರಿಗೆ ಮೊದಲ ಸಿನಿಮಾ ಆಗಿರುವುದರಿಂದ ಢವ ಢವ ಅನ್ನುತ್ತೆ. ಅಂಬರೀಷ್ ಇವ್ರು ಇಲ್ಲ. ತಂದೆ, ತಾಯಿ ಸ್ಥಾನದಲ್ಲಿ ನಿಂತು ಪ್ರೋತ್ಸಾಹ ಮಾಡ್ತಿದ್ದೀನಿ. ಜನರು ಈ ಚಿತ್ರವನ್ನು ನೋಡಿ ಪ್ರೋತ್ಸಾಹ ನೀಡ್ತಾರೆ ಅಂತ ನಂಬಿದ್ದೇನೆ ಎಂದು ಹೇಳಿದ್ದಾರೆ.
ಮಂಡ್ಯ ಜನ ಅಂತ ಪ್ರೀತಿ ಮಾಡೇ ಮಾಡ್ತಾರೆ. ಒಲವಿನ ಉಡುಗೊರೆ ಹಾಡು ಈ ಸಿನಿಮಾದಲ್ಲಿ ಇರಲೇಬೇಕು ಅಂತ ನಾನೇ ಹಾಕ್ಸಿದ್ದೀನಿ. ಯಾಕೆಂದರೆ ಈ ಹಾಡು ಅಂದ್ರೆ ಅಂಬರೀಷ್ ಅವ್ರಿಗೆ ತುಂಬಾ ಇಷ್ಟ. ಸಿನಿಮಾ ಪ್ರಮೋಷನ್‌ಗೆ ಅಭಿಷೇಕ್ ರಾಜ್ಯ ಪ್ರವಾಸ ಮಾಡ್ತಾರೆ ಎಂದು ಹೇಳಿದರು.
ಕೇಂದ್ರ ಸಚಿವ ಸ್ಥಾನ ಸಿಗುತ್ತೆ ಎಂಬ ನಿರೀಕ್ಷೆ ಇದ್ದ ವಿಚಾರದ ಬಗ್ಗೆ ಮಾತನಾಡಿದ ಸುಮಲತಾ, ಬಿಜೆಪಿಯಲ್ಲಿ 350 ಕ್ಕೂ ಹೆಚ್ಚು ಸ್ಥಾನ ಇವೆ. ಅವರಿಗೆ ಪ್ರಿಫರೆನ್ಸ್ ಕೊಡಬೇಕಾಗಿರುತ್ತದೆ. ನನಗೂ ಸಿಗಬೇಕು ಅನ್ನೋದು ಸರಿಯಲ್ಲ. ಜಿಲ್ಲೆಯ ಅಭಿವೃದ್ಧಿಗೆ ಸಹಕಾರ ಕೊಟ್ಟು ವಿಶೇಷ ಪ್ರಾಜೆಕ್ಟ್, ಸಮಸ್ಯೆಗೆ ಸಹಕಾರ ಕೊಡ್ಲಿ ಅನ್ನೋದು ನನ್ನ ಆಸೆ . ಉಳಿದಿದ್ದು ಆಮೇಲೆ ನೋಡೋಣ. ಜೂನ್ 6 ಅಥವಾ 7ಕ್ಕೆ ಪ್ರಮಾಣ ವಚನ ಸ್ವೀಕಾರ ಇರಬಹುದು. ದಿನಾಂಕದ ಬಗ್ಗೆ ಇವತ್ತು ಸಮನ್ಸ್ ಬರಬಹುದು ಎಂದು ಹೇಳಿದ್ದಾರೆ.